ಅಮೆರಿಕದ ಖ್ಯಾತ ಲೇಖಕ, ದೇಶಾದ್ಯಂತ ದಾಖಲೆಯ ಗಳಿಕೆ ಕಂಡ 'ದಿ ಆಂಡ್ರೋಮೆಡಾ ಸ್ಟ್ರೈನ್' ಹಾಗೂ 'ಜುರಾಸಿಕ್ ಪಾರ್ಕ್' ಲೇಖಕ ಮಿಷೆಲ್ ಕ್ರಿಚ್‌ಟನ್ (66) ಅವರು ವಿಧಿವಶವಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ವೈದ್ಯರಾಗಿ ಜನಾನುರಾಗಿಯಾದ್ದ ಮಿಷೆಲ್ ಬಳಿಕ ಕಾದಂಬರಿಕಾರರಾಗಿ ಖ್ಯಾತಿ ಗಳಿಸಿದ್ದರು, ಅಲ್ಲದೇ ಚಿತ್ರ ನಿರ್ಮಾಪಕರಾಗಿಯೂ ಹೆಸರು ಪಡೆದ ಕೀರ್ತಿ ಅವರದ್ದು. 66ರ ಹರೆಯದ ಮಿಷೆಲ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಅವರ ಕಾದಂಬರಿಗಳು ಪ್ರಪಂಚದಾದ್ಯಂತ 150ಮಿಲಿಯನ್‌ಕ್ಕಿಂತಲೂ ಅಧಿಕ ಪುಸ್ತಕ ಮಾರಾಟವಾಗಿದ್ದವು. ಅವರು ಮಂಗಳವಾರ ಲಾಸ್ ಏಂಜಲೀಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸಾವನ್ನಪ್ಪಿರುವುದಾಗಿ ಕುಟುಂಬ ವರ್ಗ ಹೇಳಿದೆ.
ಮಿಷೆಲ್ ಅವರ ಜುರಾಸಿಕ್ ಪಾರ್ಕ್ ಕಾದಂಬರಿಯನ್ನು ಸ್ಟೀವನ್ ಸ್ಟೈಲ್‌ಬರ್ಗ್ ಅವರು ಸಿನಿಮಾವನ್ನಾಗಿ ಮಾಡಿದ್ದರು. ಇದು ಪ್ರಪಂಚದಾದ್ಯಂತ ದಾಖಲೆಯ ಗಳಿಕೆಯನ್ನೂ ತಂದುಕೊಟ್ಟಿತು.
ಮಿಷೆಲ್ ಅವರು 1942ರ ಅಕ್ಟೋಬರ್ 23ರಂದು ಚಿಕಾಗೋದಲ್ಲಿ ಜನ್ಮತಳೆದಿದ್ದರು. ಅವರು ಹಾರ್ವರ್ಡ್ ಮೆಡಿಕಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅವರು ತಮ್ಮ ಮೊತ್ತ ಮೊದಲ ಕಾದಂಬರಿಯನ್ನು ಬರೆದಿದ್ದರು. 1969ರಲ್ಲಿ ಮೆಡಿಕಲ್ ಡಿಗ್ರಿಯನ್ನು ಪಡೆದಿದ್ದರು. ಅದೇ ವರ್ಷ ಆಂಡ್ರೋಮೆಡಾ ಸ್ಟ್ರೈನ್ ಕಾದಂಬರಿ ಪ್ರಕಟಣೆಯಾಗಿ ದಾಖಲೆಯ ಮಾರಾಟ ಕಂಡಿತ್ತು.
|