ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ : ಅವಳಿ ಅತ್ಮಾಹುತಿ ದಾಳಿಗೆ 19 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ : ಅವಳಿ ಅತ್ಮಾಹುತಿ ದಾಳಿಗೆ 19 ಬಲಿ
ವಾಯುವ್ಯ ಪಾಕಿಸ್ಥಾನದಲ್ಲಿ ಗುರುವಾರ ಉಗ್ರಗಾಮಿಗಳು ನಡೆಸಿದ ಎರಡು ಆತ್ಮಾಹುತಿ ದಾಳಿಗೆ 19 ಮಂದಿ ಬಲಿಯಾಗಿದ್ದಾರೆ.

ಪ್ರತಿದಾಳಿಯಾಗಿ ತಾಲಿಬಾನ್ ಉಗ್ರಗಾಮಿಗಳ ಸುರಕ್ಷಾ ತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿರುವುದಾಗಿ ಪೊಲೀಸ್ ಮತ್ತು ಅಧಿಕಾರಿ ವಿಭಾಗವು ಹೇಳಿದೆ.

ಖಾರ್ ಬಜೌರ್ ಜಿಲ್ಲೆಯಿಂದ ಸುಮಾರು 40ಕಿ.ಮೀ ದೂರದಲ್ಲಿರುವ ಬ್ಯಾಟ್‌ಮಲಯ್ ಪಟ್ಟಣದ ಸರಕಾರ ಬೆಂಬಲಿತ ಆದಿವಾಸಿ ಶಕ್ತಿ ಅಥವಾ "ಲಷ್ಕರ್" ಗೆ ತನ್ನನ್ನು ತಾನೇ ಸ್ಫೋಟಿಸಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 17 ಮಂದಿ ಬಲಿಯಾಗಿದ್ದು, 45 ಮಂದಿ ಗಾಯಾಗೊಂಡಿದ್ದಾರೆ.

ಅದಾದ ನಂತರ ಸ್ವಾತ್ ವ್ಯಾಲಿಯ ಪ್ರಧಾನ ಪಟ್ಟಣವಾದ ಮಿಗೊಂರದ ಅರೆಸೈನಿಕದಳದ ಶಿಬಿರವನ್ನು ಗುರಿಯಾಗಿಸಿ ಸ್ಘೋಟಕ ವಸ್ತು ಹೊತ್ತ ಕಾರಿನಲ್ಲಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಎರಡು ಮಂದಿ ಬಲಿಯಾಗಿದ್ದು 11 ಮಂದಿ ಗಾಯಾಗೊಂಡಿದ್ದಾರೆ.

ಇದರ ವಿರುದ್ಧ ಪಾಕಿಸ್ಥಾನ ಬಜೌರ್‌ಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿಗಳ ಸಹಿತ 17 ಮಂದಿಯನ್ನು ನಿಗ್ರಹಿಸಲಾಗಿದೆ. ಇದೇ ತರ ನಡೆಸಿದ ಇನ್ನೊಂದು ವೈಮಾನಿಕ ದಾಳಿಯಲ್ಲಿ 15 ಉಗ್ರಗಾಮಿಗಳು ಹತರಾಗಿದ್ದಾರೆಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.

ಪಾಕಿಸ್ತಾನ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಆತ್ಮಾಹುತಿ ದಾಳಿಯನ್ನು "ಹೇಯ ಕೃತ್ಯ"ವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅವರು ಆತ್ಮಾಹುತಿ ದಾಳಿ ನಡೆಸಿದವರನ್ನು ಪತ್ತೆ ಹಚ್ಚುವುದಾಗಿ ಮತ್ತು ಯಾವುದೇ ಬೆಲೆ ತೆತ್ತು ದೇಶದಿಂದ ಉಗ್ರವಾದಿಗಳನ್ನು ಹತ್ತಿಕ್ಕುವುದಾಗಿ ಪ್ರತಿಜ್ಞೆ ಕೈಗೊಂಡಿರುವುದಾಗಿ ಮಾಧ್ಯಮದ ವರದಿಯೊಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಜುರಾಸಿಕ್ ಪಾರ್ಕ್' ಲೇಖಕ ವಿಧಿವಶ
ಅಫ್ಘಾನ್ ವಿರುದ್ಧದ ಯುದ್ಧ ನಿಲ್ಲಿಸಿ: ಒಬಾಮಗೆ ತಾಲಿಬಾನ್ ಆಗ್ರಹ
ಭೂತಾನ್: ನೂತನ 'ಯುವರಾಜ'ನ ಪಟ್ಟಾಭಿಷೇಕ
ವಂಚನೆ ಆರೋಪ : ಒಲ್‌ಮರ್ಟ್ ವಿಚಾರಣೆ
ಇರಾಕ್-ತುರ್ಕಿ ತೈಲ ಕೊಳವೆ ಸ್ಫೋಟ
ಒಬಾಮ ಗೆಲುವು ಪಾಕಿಸ್ತಾನಕ್ಕೆ ಆತಂಕ !