ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಸಲಹಾ ತಂಡಕ್ಕೆ ಭಾರತೀಯ ಸೋನಲ್ ಆಯ್ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಸಲಹಾ ತಂಡಕ್ಕೆ ಭಾರತೀಯ ಸೋನಲ್ ಆಯ್ಕೆ
ಅಮೆರಿಕದ 44ನೇ ಅಧ್ಯಕ್ಷರಾಗಿ ಡೆಮೋಕ್ರಟ್‌ನ ಬರಾಕ್ ಹುಸೇನ್ ಒಬಾಮ ಅವರು ಆಯ್ಕೆಗೊಂಡ ಬೆನ್ನಲ್ಲೇ, ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಒಬಾಮ ತಂಡಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಮೂಲಕ ಖ್ಯಾತ ಅರ್ಥಶಾಸ್ತ್ರಜ್ಞೆ ಸೋನಲ್ ಶಾ ಅವರನ್ನು ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

40ರ ಹರೆಯದ ಸೋನಾಲ್ ಅವರು ಗೂಗಲ್ ಕಂಪೆನಿಯಲ್ಲಿ ಅರ್ಥಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ 2003ರಲ್ಲಿ ಅಮೆರಿಕದ ಆರ್ಥಿಕ ತಜ್ಞೆ ಎಂಬ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದರು.

ಒಬಾಮ ಮತ್ತವರ ತಂಡಕ್ಕೆ ಸಲಹೆ ನೀಡಲು ನೇಮಿಸಲಾಗಿರುವ ವಿವಿಧ ಕ್ಷೇತ್ರಗಳ ತಜ್ಞರ ಸಮಿತಿಯಲ್ಲಿ 40ವರ್ಷದ ಸೋನಲ್ ಶಾ ಸಹ ಒಬ್ಬರಾಗಿದ್ದಾರೆ.

ಸೋನಲ್ ಅವರ ತಂಜೆ 1970ರಲ್ಲಿ ಗುಜರಾತ್‌ನಿಂದ ನ್ಯೂಯಾರ್ಕ್‌ಗೆ ತೆರಳಿದ್ದರು. 1972ರಲ್ಲಿ ಸೋನಲ್ ತಮ್ಮ ತಾಯಿ ಹಾಗೂ ಸಹೋದರಿಯರ ಜೊತೆ ಅಮೆರಿಕಕ್ಕೆ ತೆರಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ : ಅವಳಿ ಅತ್ಮಾಹುತಿ ದಾಳಿಗೆ 19 ಬಲಿ
'ಜುರಾಸಿಕ್ ಪಾರ್ಕ್' ಲೇಖಕ ವಿಧಿವಶ
ಅಫ್ಘಾನ್ ವಿರುದ್ಧದ ಯುದ್ಧ ನಿಲ್ಲಿಸಿ: ಒಬಾಮಗೆ ತಾಲಿಬಾನ್ ಆಗ್ರಹ
ಭೂತಾನ್: ನೂತನ 'ಯುವರಾಜ'ನ ಪಟ್ಟಾಭಿಷೇಕ
ವಂಚನೆ ಆರೋಪ : ಒಲ್‌ಮರ್ಟ್ ವಿಚಾರಣೆ
ಇರಾಕ್-ತುರ್ಕಿ ತೈಲ ಕೊಳವೆ ಸ್ಫೋಟ