ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆರ್ಥಿಕತೆ ಬಹುದೊಡ್ಡ ಸವಾಲು: ಒಬಾಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕತೆ ಬಹುದೊಡ್ಡ ಸವಾಲು: ಒಬಾಮ
PTI
ಯುಎಸ್ ಅಧ್ಯಕ್ಷ ಬರಾಕ್ ಒಬಾಮ ಅವರು ಶುಕ್ರವಾರ ಬಿಡುಗಡೆಯಾದ ನಿರುದ್ಯೋಗ ಅಂಕಿಅಂಶಗಳು ಮತ್ತು ಅಟೊ ಮೊಬೈಲ್ ಕ್ಷೇತ್ರದ ಹಿನ್ನಡೆಯ ವರದಿಯ ನಂತರ ತಮ್ಮ ಆಡಳಿತವು ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯೊನ್ಮುಖವಾಗಲಿದೆ ಎಂದು ಹೇಳಿದ್ದಾರೆ.

"ಇಡೀ ಜೀವಮಾನದಲ್ಲಿನ ಅತ್ಯಂತ ದೊಡ್ಡ ಆರ್ಥಿಕ ಸವಾಲನ್ನು ನಾವು ಈಗ ಎದುರಿಸುತ್ತಿದ್ದೇವೆ ಮತ್ತು ಇದನ್ನು ಪರಿಹರಿಸಲು ನಾವು ತ್ವರಿತವಾಗಿ ಕಾರ್ಯೊನ್ಮುಖರಾಗುತ್ತೇವೆ" ಎಂದ ಒಬಾಮ ತಾವು ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ಪ್ರಥಮ ಸುದ್ದಿಗೋಷ್ಠಿಯಲ್ಲಿ ಮಾತಾನಾಡುತ್ತಿದ್ದರು.

ಪತ್ರಿಕಾಗೋಷ್ಠಿಗೆ ಮೊದಲು ಒಬಾಮ ಮತ್ತು ಬಿಡನ್ 17 ಸದಸ್ಯರ ಆರ್ಥಿಕ ಸಲಹಾಕಾರ ಸಮಿತಿಯನ್ನು ಭೇಟಿಯಾದರು.

ನೌಕರರ ವಿಭಾಗದ ಮಾಸಿಕ ಉದ್ಯೋಗ ವರದಿಯಂತೆ ಅಕ್ಟೋಬರ್‌ನಲ್ಲಿ 240,000 ಉದ್ಯೋಗ ನಷ್ಟ ಉಂಟಾಗಿದೆ, ಇದರೊಂದಿಗೆ ಈ ವರ್ಷದಲ್ಲಿ ಇದುವರೆಗೆ ಉದ್ಯೋಗ ಕಳೆದುಕೊಂಡವರ ಸಂಖ್ಯೆ 1.5 ಲಕ್ಷಕ್ಕೇರಿದೆ. ನಿರೋದ್ಯೋಗ ಮಟ್ಟವು 6.1 ಪ್ರತಿಶತದಿಂದ 6.5 ಪ್ರತಿಶತಕ್ಕೇರಿದೆ, ಇದು ಮಾರ್ಚ್ 1994ರ ನಂತರದ ಅತ್ಯಧಿಕ ನಿರುದ್ಯೋಗ ಮಟ್ಟವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್: ಅಮೆರಿಕ ಮಿಸೈಲ್ ದಾಳಿಗೆ 10 ಬಲಿ
ನ.10 ರಂದು ಒಬಾಮ-ಬುಷ್ ಭೇಟಿ
ಒಬಾಮ ಸಲಹಾ ತಂಡಕ್ಕೆ ಭಾರತೀಯ ಸೋನಲ್ ಆಯ್ಕೆ
ಪಾಕ್ : ಅವಳಿ ಅತ್ಮಾಹುತಿ ದಾಳಿಗೆ 19 ಬಲಿ
'ಜುರಾಸಿಕ್ ಪಾರ್ಕ್' ಲೇಖಕ ವಿಧಿವಶ
ಅಫ್ಘಾನ್ ವಿರುದ್ಧದ ಯುದ್ಧ ನಿಲ್ಲಿಸಿ: ಒಬಾಮಗೆ ತಾಲಿಬಾನ್ ಆಗ್ರಹ