ರಷ್ಯಾದ ಫೆಸಿಫಿಕ್ ನೌಕಾಪಡೆಯ ನ್ಯೂಕ್ಲಿಯರ್ ಸಬ್‌ಮೆರಿನ್ ಅವಘಡದಲ್ಲಿ 20ಕ್ಕಿಂತಲೂ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ ಎಂದು ರಷ್ಯಾ ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
"ನವೆಂಬರ್ ಎಂಟರಂದು ಸಮುದ್ರದಲ್ಲಿ ಪರೀಕ್ಷಿಸುತ್ತಿದ್ದ ಸಂದರ್ಭ ನ್ಯೂಕ್ಲಿಯರ್ ಸಬ್‌ಮೆರಿನ್‌ನಲ್ಲಿ ಅಕಸ್ಮಿಕವಾಗಿ ಅಗ್ನಿಶಾಮಕ ವ್ಯವಸ್ಥೆ ಚಾಲನೆಯಾದುದರಿಂದ 20 ಕ್ಕಿಂತಲೂ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ" ಎಂದು ರಷ್ಯಾದ ನೌಕಾಪಡೆಯ ಕಾಪ್ಟನ್ ಇಗೋರ್ ದೈಗಾಲೊ ಅವರು ಹೇಳಿದ್ದಾರೆ. "ಹಡಗಿನ ಕೆಲಸಗಾರರು ದುರ್ಘಟನೆಗೆ ಆಹುತಿಯಾದವರಲ್ಲಿ ಸೇರಿದ್ದಾರೆ" ಎಂದು ದ್ಯಾಗಲೊ ಹೇಳಿದ್ದಾರೆ.
ನೌಕಾಪಡೆಯ ಕಮಾಂಡರ್ ಪರೀಕ್ಷೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ ಮತ್ತು ಸಬಿಮೆರಿನ್ ತಾತ್ಕಲಿಕ ನೆಲೆಯತ್ತ ಧಾವಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. |