ರಕ್ಷಣಾ ಕಾರ್ಯಕರ್ತರು ಮೃತದೇಹಗಳಿಂದ ತುಂಬಿದ ಕೊಠಡಿಯನ್ನು ಪ್ರವೇಶಿಸಿದ ನಂತರ ಹೈಟಿ ರಾಜಧಾನಿಯ ಹೊರವಲಯದ ಪಟ್ಟಣವೊಂದರಲ್ಲಿ ಶಿಥಿಲಾವಸ್ಥೆಯಲ್ಲಿರುವ ಚರ್ಚ್ ಶಾಲೆ ಶುಕ್ರವಾರ ಕುಸಿದು ಬಿದ್ದ ಪರಿಣಾಮ ಸಾವಿಗೀಡಾದವರ ಸಂಖ್ಯೆ 90ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು.
ಸಿವಿಲ್ ಪ್ರೋಟೆಕ್ಷನ್ ಸರ್ವಿಸ್ ಮುಖ್ಯಸ್ಥ ಅಲ್ಟಾ ಜೀನ್ ಬೆಪ್ಟಿಸ್ಟೇ ಅವರು 84 ಜನ ಮತರಾಗಿದ್ದಾರೆ ಎಂದು ದೃಢೀಕೃತವಾಗಿದ್ದು 150ಜನ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನೊರ್ವ ಅಧಿಕಾರಿ ಮೈಕಲ್ ಜೋಸೆಫ್ ತಾವು ಇನ್ನೂ ಎಂಟು ದೇಹಗಳನ್ನು ನೋಡಿರುವುದಾಗಿ ತಿಳಿಸಿರುವ ಮೂಲಕ ಒಟ್ಟು ಸಾವಿನ ಸಂಖ್ಯೆ 92ಕ್ಕೇರಿದೆ.
ನಾವು ಈವರೆಗೆ ಮೃತದೇಹಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿಲ್ಲ ಎಂದು ಜೋಸೆಫ್ ತಿಳಿಸಿದ್ದಾರೆ. ಶಾಲೆಯಲ್ಲಿ 700 ಮಕ್ಕಳ ದಾಖಲಾತಿ ಇದ್ದು, ಕಟ್ಟಡ ಕುಸಿದಾಗ ಅಲ್ಲಿ ಎಷ್ಟು ಮಕ್ಕಳು ಇದ್ದರು ಎಂಬುದು ತಿಳಿದು ಬಂದಿಲ್ಲ. |