ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬುಷ್ ಆದೇಶಗಳ ರದ್ದು ಮಾಡಲಿರುವ ಒಬಾಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬುಷ್ ಆದೇಶಗಳ ರದ್ದು ಮಾಡಲಿರುವ ಒಬಾಮ
ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ಆಡಳಿತಾತ್ಮಕ ಅಧಿಕಾರ ಪ್ರಯೋಗಿಸಿ ಕಾಂಡಕೋಶ (ಸ್ಟೆಮ್ ಸೆಲ್) ಸಂಶೋಧನೆ ಮತ್ತು ದೇಶೀ ತೈಲ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪ ಕುರಿತಾದ ಅಧ್ಯಕ್ಷ ಜಾರ್ಜ್ ಬುಷ್ ಅವರ ನೀತಿಗಳನ್ನು ಬದಲಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ವಿಷಯಗಳ ಬಗ್ಗೆ ಬುಷ್ ಅವರ ಆಡಳಿತಾತ್ಮಕ ಆದೇಶಗಳನ್ನು ನಿಯೋಜಿತ ಅಧ್ಯಕ್ಷರು ಪರಾಮರ್ಶಿಸುತ್ತಿದ್ದು, ಎಂಟು ವರ್ಷಗಳ ರಿಪಬ್ಲಿಕನ್ ಆಡಳಿತಾವಧಿಯ ಹಲವು ನೀತಿಗಳನ್ನೂ ಮರು ವಿಮರ್ಶಿಸಲಾಗುತ್ತದೆ ಎಂದು ಒಬಾಮ ಅವರ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಉಸ್ತುವಾರಿ ಜಾನ್ ಪೊಡೆಸ್ಟಾ ಅವರು ನ್ಯೂಸ್ ವೀಕ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ನ ಅಂಗೀಕಾರಕ್ಕಾಗಿ ಕಾಯದೆಯೇ ಅಧ್ಯಕ್ಷರು ತಮ್ಮ ಆಡಳಿತಾತ್ಮಕ ಅಧಿಕಾರವನ್ನು ಪ್ರಯೋಗಿಸಲು ಸಾಕಷ್ಟು ಅವಕಾಶಗಳಿವೆ. ಜನರು ತಮಗೆ ಬದಲಾವಣೆಗಾಗಿ ಸಂಪೂರ್ಣ ಮತ ನೀಡಿ ಆರಿಸಿದ್ದಾರೆ ಎಂದು ಒಬಾಮ ಖಚಿತ ನಿಲುವು ಹೊಂದಿದ್ದಾರೆ. ಈ ಕಾರಣಕ್ಕಾಗಿ ಬುಷ್ ಆಡಳಿತವು ಹಾಕಿಕೊಟ್ಟ ಹಾದಿಯಿಂದ ವಿಭಿನ್ನವಾಗಿ ಮುಂದುವರಿಯಬೇಕಿದೆ ಎಂದು ಪೊಡೆಸ್ಟಾ ತಿಳಿಸಿದ್ದಾರೆ.

ವೈವಿಧ್ಯಮಯ ಸಂಪುಟ ರಚನೆಗೆ ಒಬಾಮ ಸಿದ್ಧತೆ ನಡೆಸುತ್ತಿದ್ದಾರೆ. ಶ್ವೇತಭವನಕ್ಕಾಗಿನ ತಮ್ಮ ಹೋರಾಟ ಸಂದರ್ಭದಲ್ಲಿ ಬೆಂಬಲಿಸಿದ ಸ್ವತಂತ್ರರು ಮತ್ತು ರಿಪಬ್ಲಿಕನ್ನರ ಬಳಿಗೂ ಅವರು ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮ ಮನಮೋಹನ್‌ಗೆ ಕರೆ ಮಾಡಿಲ್ಲವೇಕೆ?
ಹೈಟಿ: 90ಕ್ಕೇರಿದ ಸಾವಿನ ಸಂಖ್ಯೆ
ರಷ್ಯಾ ಸಬ್‌ಮೆರಿನ್ ದುರಂತ: ಕನಿಷ್ಠ 20 ಸಾವು
ಪಾಕ್: ಸೈಬರ್ ಉಗ್ರರಿಗೆ ಮರಣ ದಂಡನೆ
ಜಿ-20 ಶೃಂಗ ಸಭೆಗೆ ಒಬಾಮ ಗೈರುಹಾಜರಿ
ಹೈಟಿ: ಶಾಲೆ ಕುಸಿದು 50 ಸಾವು