ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೋಲಿಗೆ ಬುಷ್ ನೀತಿಯೇ ಕಾರಣ: ಪಾಲಿನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಲಿಗೆ ಬುಷ್ ನೀತಿಯೇ ಕಾರಣ: ಪಾಲಿನ್
ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಯ ಹೊಂದಲು ಬುಷ್ ಆಡಳಿತದ ನೀತಿಯೇ ಪ್ರಮುಖ ಕಾರಣ ಎಂದು ಅಲಾಸ್ಕಾ ರಾಜ್ಯಪಾಲೆ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಾರಾ ಪಾಲಿನ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಬುಷ್ ಆಡಳಿತದ ಆರ್ಥಿಕ ರೀತಿ-ನೀತಿಗಳೇ ಕಳೆದ ವಾರ ಅಧ್ಯಕ್ಷಗಾದಿಗಾಗಿ ನಡೆದ ಚುನಾವಣೆಯಲ್ಲಿ ಸೋಲನ್ನನುಭವಿಸಲು ಪ್ರಮುಖ ಕಾರಣವಾಗಿದೆ ಎಂದು ದೂರಿರುವ ಅವರು, ಆದರೆ ತಾನು ಅವಕಾಶದಿಂದ ವಂಚಿತಳಾಗಿಲ್ಲ, ಮುಂದಿನ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಭರವಸೆಯನ್ನೂ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಈ ಬಾರಿ ತಾನು ಸ್ಪರ್ಧೆಯಲ್ಲಿ ಸೋಲನನ್ನನುಭವಿಸಿರಬಹುದು, ಆದರೆ ಅವಕಾಶಗಳ ಬಾಗಿಲು ಮಾತ್ರ ಸದಾ ತೆರೆದೆ ಇರುವುದಾಗಿ ತಿಳಿಸಿದ ಪಾಲಿನ್, ಅವಕಾಶಗಳ ದಾರಿಯಿಂದ ವಂಚಿತಳನ್ನಾಗಿ ಮಾಡಬೇಡ ಎಂದು ತಾನು ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಿರುತ್ತೇನೆ ಎಂದು ಹೇಳಿದರು.

ಅವರು ಅಧ್ಯಕ್ಷೀಯ ಚುನಾವಣೆಯ ನಂತರ ಫೋಕ್ಸ್ ನ್ಯೂಸ್‌ಗೆ ಸೋಮವಾರ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.

ಆದರೂ ಇನ್ನೂ ಕೂಡ ಅವಕಾಶಗಳು ಇರುವುದರಿಂದ, ತಾನು ಭವಿಷ್ಯದಲ್ಲಿ ಭರವಸೆ ಹೊಂದಿರುವುದಾಗಿ ಸಾರಾ ಈ ಸಂದರ್ಭದಲ್ಲಿ ಮಾತನಾಡುತ್ತ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಧೋರಣೆಯಲ್ಲಿ ಬದಲಾವಣೆಯಿಲ್ಲ: ಪಾಕ್‌ಗೆ ಅಮೆರಿಕ
ನ.14: ಭಾರತದಿಂದ 30 ಪಾಕ್ ಕೈದಿಗಳ ಬಿಡುಗಡೆ
ಎಲ್ಟಿಟಿಇ ಸಂಧಾನ ಕರೆಗೆ ಶ್ರೀಲಂಕಾ ತಿರಸ್ಕಾರ
ಇರಾಕ್ : ಬಾಂಬ್ ದಾಳಿಗೆ 8 ಬಲಿ
ಬಾಲಿ: ಬಾಂಬ್ ಸ್ಫೋಟ ಆರೋಪಿಗಳಿಗೆ ಮರಣದಂಡನೆ
ಬುಷ್ ಆದೇಶಗಳ ರದ್ದು ಮಾಡಲಿರುವ ಒಬಾಮ