ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಟಿಬೆಟ್ ಬಿಕ್ಕಟ್ಟು ಮಾತುಕತೆ ವಿಫಲ : ಚೀನಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಬೆಟ್ ಬಿಕ್ಕಟ್ಟು ಮಾತುಕತೆ ವಿಫಲ : ಚೀನಾ
ಟಿಬೆಟ್ ಬಿಕ್ಕಟ್ಟಿನ ಬಗ್ಗೆ ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಬೆಂಬಲಿತ ರಾಯಭಾರಿಗಳೊಂದಿಗೆ ನಡೆಸಿದ ಅಂತಿಮ ಸುತ್ತಿನ ಮಾತುಕತೆಯು ವಿಫಲಗೊಂಡಿದೆ ಎಂದು ಚೀನಾ ಅಧಿಕಾರಿಗಳು ಸೋಮವಾರ ತಿಳಿಸಿದ್ದು, ಹಿಮಾಲಯದಲ್ಲಿರುವ ಟಿಬೆಟ್ ಪ್ರದೇಶದ ಬಗ್ಗೆ ಯಾವುದೇ ರಾಜಿಗೆ ತಯಾರಿಲ್ಲವೆಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ನವೆಂಬರ್ 5ರಿಂದ ಆರಂಭವಾದ ಎಂಟನೇ ಸುತ್ತಿನ ಮಾತುಕತೆಯಲ್ಲಿ ಟಿಬೆಟ್‌ನ ಸಮಗ್ರ ಅಭಿವೃದ್ಧಿಯ ಬಗ್ಗೆ ನಡೆಸಿದ ಸಂಧಾನ ಮಾತುಕತೆಯು ವಿಫಲಗೊಳ್ಳಲು ದಲೈಲಾಮಾ ನಿಯಮಿತ ಪ್ರತಿನಿಧಿಗಳು ಪೂರ್ಣ ಹೊಣೆಗಾರರೆಂದು ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷವು ತಿಳಿಸಿದೆ.

ದಲೈಲಾಮಾ ಪ್ರತಿನಿಧಿಗಳಾದ ಲೋದಿ ಗ್ಯಾಲ್‌ಸ್ಟನ್ ಗ್ಯಾರಿ ಮತ್ತು ಕೆಲ್‌ಸಂಗ್ ಗ್ಯಾಲ್‌ಸ್ಟನ್‌ರೊಂದಿಗೆ ಚೀನಾದ ಪ್ರತಿನಿಧಿಗಳು ಟಿಬೆಟ್‌ನ ಪುನರೇಕೀಕರಣ, ಪ್ರಾದೇಶಿಕ ಅಖಂಡತೆ ಮತ್ತು ಚೀನಾದ ಜನತೆಯ ರಾಷ್ಟ್ರೀಯ ಘನತೆಯ ಬಗ್ಗೆ ಮಾತುಕತೆಯನ್ನು ನಡೆಸಲಾಯಿತು.

ಟಿಬೆಟಿಯನ್ನರ ಸ್ವತಂತ್ರ ಅಧಿಕಾರಕ್ಕಾಗಿ 73 ವರ್ಷದ ದಲೈಲಾಮಾ ಟಿಬೆಟ್ ಮತ್ತು ಇತರ ಪ್ರದೇಶದಲ್ಲಿ ಬೀಜಿಂಗ್ ವಿರುದ್ಧದ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದರು ಎಂಬ ಚೀನಾದ ಆರೋಪವನ್ನು ದಲೈಲಾಮಾ ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೋಲಿಗೆ ಬುಷ್ ನೀತಿಯೇ ಕಾರಣ: ಪಾಲಿನ್
ಧೋರಣೆಯಲ್ಲಿ ಬದಲಾವಣೆಯಿಲ್ಲ: ಪಾಕ್‌ಗೆ ಅಮೆರಿಕ
ನ.14: ಭಾರತದಿಂದ 30 ಪಾಕ್ ಕೈದಿಗಳ ಬಿಡುಗಡೆ
ಎಲ್ಟಿಟಿಇ ಸಂಧಾನ ಕರೆಗೆ ಶ್ರೀಲಂಕಾ ತಿರಸ್ಕಾರ
ಇರಾಕ್ : ಬಾಂಬ್ ದಾಳಿಗೆ 8 ಬಲಿ
ಬಾಲಿ: ಬಾಂಬ್ ಸ್ಫೋಟ ಆರೋಪಿಗಳಿಗೆ ಮರಣದಂಡನೆ