ಅಮೆರಿಕ ಮತ್ತು ಭಾರತ ನಾಗರಿಕ ಪರಮಾಣು ಒಪ್ಪಂದದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಕಳೆದ ಆರು ವರ್ಷಗಳಿಂದ ಸೂಕ್ಷ್ಮತರದ ಪರಮಾಣು ತಂತ್ರಜ್ಞಾನ ಮಾರಾಟ ಮಾಡಲು ಭಾರತದ ಮೇಲೆ ಹೇರಿದ್ದ ನಿಷೇಧವನ್ನು ವಾಪಸು ತೆಗೆದುಕೊಂಡಿರುವುದಾಗಿ ಬ್ರಿಟನ್ ತಿಳಿಸಿದೆ.
ನಾಗರಿಕ ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ 2002ರ ಮಾರ್ಚ್ ತಿಂಗಳಲಿನಲ್ಲಿ ಭಾರತಕ್ಕೆ ನ್ಯೂಕ್ಲಿಯರ್ ವಸ್ತುಗಳ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ಬಿಲ್ ರಾಮ್ಮೆಲ್ಲ್ ಅವರು ಸೋಮವಾರ ಹೇಳಿದ್ದಾರೆ.
ಇದೀಗ ಭಾರತದ ಮೇಲೆ ಹೇರಿದ್ದ ನಿಷೇಧ ನೀತಿಯಲ್ಲಿ ಬದಲಾವಣೆ ತರಲಾಗಿದ್ದು, ನಾಗರಿಕ ಪರಮಾಣು ಒಪ್ಪಂದದ ನಂತರ ನಾವು ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಸಹಕಾರ ನೀಡುವುದಾಗಿ ಬ್ರಿಟನ್ ತಿಳಿಸಿದೆ.
ಇತ್ತೀಚೆಗಷ್ಟೇ ಅಮೆರಿಕ ಮತ್ತು ಭಾರತದ ನಡುವೆ ನಾಗರಿಕ ಪರಮಾಣು ಒಪ್ಪಂದ ಏರ್ಪಟ್ಟಿತ್ತು. ಏತನ್ಮಧ್ಯೆ ಭಾರತದ ಮೇಲೆ ತಂತ್ರಜ್ಞಾನ ನೀಡಿಕೆ ಕುರಿತು ಬ್ರಿಟನ್ ಹೇರಿದ್ದ ನಿಷೇಧವನ್ನು ಹಿಂತೆಗೆದುಕೊಂಡಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. |