ಉತ್ತರ ಮೆಕ್ಸಿಕೊದ ಗಡಿ ಪಟ್ಟಣ ಪ್ರದೇಶವಾದ ಸಿದಾದ್ ಜ್ವಾರೆಝ್ ಪ್ರದೇಶದಲ್ಲಿ ಸಂಶಯಿತ ಡ್ರಗ್ಸ್ ಹಿಂಸಾಚಾರದಲ್ಲಿ 19 ಮಂದಿ ಬಲಿಯಾಗಿದ್ದು, ಇವರಲ್ಲಿ ಒಬ್ಬನ ಮೃತದೇಹವನ್ನು ಸ್ಛಳೀಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಸುಟ್ಟುಕರಕಲಾದ ರೀತಿಯಲ್ಲಿ ಬಿಸಾಡಲಾಗಿತ್ತೆಂದು ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಎಸೆಯಲ್ಪಟ್ಟ ಮೃತದೇಹದ ಶಿರಚ್ಛೇದ ಮಾಡಲಾಗಿತ್ತು ಎಂಬ ಅಧಿಕಾರಿಗಳ ಹೇಳಿಕೆಯ ವಿರುದ್ಧ ಸೋಮವಾರ ಸಂಜೆ ಜಿಲ್ಲೆಯ ಅರ್ಟಾನಿ ಕಾರ್ಯಾಲಯದ ಸ್ಥಳೀಯ ವಕ್ತಾರನೊಬ್ಬನು ಪ್ರತಿಕ್ರಿಯೆ ನೀಡುತ್ತಾ, ಅಪರಿಚಿತ ಮೃತದೇಹವನ್ನು ಕಾರಿನಲ್ಲಿ ಬಂದ ಅನಾಮಿಕ ವ್ಯಕ್ತಿಗಳು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಎಸೆದು ಹೋಗಿರವುದಾಗಿ ತಿಳಿಸಿದ್ದಾನೆ.
ಸಿದಾದ್ ಜ್ವಾರೆಝ್ ಆಸ್ಪತ್ರೆಯ ಮತ್ತೊಂದು ಕಡೆ ಸಶಸ್ತ್ರ ಕಮಾಂಡೋ ಕಾರ್ಯಾಚರಣೆಯಲ್ಲಿ ಎರಡು ಮಹಿಳೆಯರ ಸಹಿತ ನಾಲ್ಕು ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.
ಯುಎಸ್ ಸಿಟಿಯ ಹಿಂಸಾ ಪೀಡಿತ ಪ್ರದೇಶವಾದ ಇಐ ಪಾಸೊ, ಟೆಕ್ಸಾಸ್ ಪ್ರದೇಶದಲ್ಲಿ ಕಮಾಂಡೊಗಳು ನಡೆಸಿದ ಪ್ರತ್ಯೇಕವಾದ ದಾಳಿಯಲ್ಲಿ 13 ಮಂದಿ ಹತರಾಗಿದ್ದು, ಇದು ಮೆಕ್ಸಿಕೊದಲ್ಲಿ ಈ ವರ್ಷ ನಡೆದ ಅತೀ ಹೆಚ್ಚಿನ ಸಂಖ್ಯೆಯ ಹತ್ಯೆಯಾಗಿದ್ದು, ಇಲ್ಲಿ ಈ ವರೆಗೆ ಸೈನ್ಯದ ಕಾರ್ಯಾಚರಣೆಯಲ್ಲಿ 1,300 ಮಂದಿ ಬಲಿಯಾಗಿದ್ದಾರೆ. |