ಸ್ವಾತ್ ಮತ್ತು ಬಾಜೌರ್ ಪ್ರದೇಶದಲ್ಲಿ ಪಾಕಿಸ್ತಾನ ಸೈನ್ಯವು ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ 13 ತಾಲಿಬಾನ್ ಉಗ್ರರು ಹತರಾಗಿದ್ದು ಹಲವಾರು ಮಂದಿ ಗಾಯಾಗೊಂಡಿದ್ದು, ಬುಡಕಟ್ಟು ಪ್ರದೇಶವಾದ ಒಟ್‌ಮನ್‌ಖೇಲ್ ಪ್ರದೇಶದಲ್ಲಿ 12 ತಾಲಿಬಾನ್ ಕಮಾಂಡರ್‌ಗಳು ಜಿರ್ಗಾ ಆಡಳಿತ ವಿಭಾಗದೆದುರು ಶರಣಾಗತರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಮಂದಿ ತಾಲಿಬಾನ್ ಉಗ್ರರು ಮಟ್ಟಾ ತೆಸಿಲ್ ಪ್ರದೇಶದ ಮೊರಗೈ ಮತ್ತು ಶಲ್ಕೊ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಹತರಾಗಿದ್ದು, ಮತ್ತಿಬ್ಬರು ಸ್ವಾತ್ ಪ್ರದೇಶದ ಕಾಬಲ್ ತೆಸಿಲ್ ಎಂಬ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಯಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಸೈನ್ಯವು ಬಜೌರ್‌ನ ಸೆವಯ್ ಮತ್ತು ದಮಡೊಲಾ ಪ್ರದೇಶದಲ್ಲಿನ ತಾಲಿಬಾನ್ ಉಗ್ರರ ಅಡಗು ತಾಣಗಳಿಗೆ ನಡೆಸಿದ ವೈಮಾನಿಕ ಬಾಂಬ್ ದಾಳಿಯಲ್ಲಿ ಆರು ಉಗ್ರರು ಹತರಾಗಿದ್ದು, ದಾಳಿಯ ಪರಿಣಾಮ ತಾಲಿಬಾನ್ ಉಗ್ರರ ಅಡಗು ತಾಣಗಳು ಧ್ವಂಸಗೊಂಡಿದೆ.
ಆರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆಯೆಂದು ಸ್ಛಳೀಯ ಆಡಳಿತ ಅಧಿಕಾರಿಯಾದ ಜಮೀಲ್ ಖಾನ್ ಅವರ ಹೇಳಿಕೆಯನ್ನು ಡೈಲಿ ಟೈಮ್ಸ್ ವರದಿ ಮೂಡಿದೆ. |