ಬಹು ವರ್ಷಗಳಿಂದ ಭಾರತ-ಚೀನಗಳ ನಡುವೆ ವಿವಾದಕ್ಕೆ ಕಾರಣವಾಗಿರುವ ಅರುಣಾಚಲ ಪ್ರದೇಶದ ಕುರಿತು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೀಡಿದ ಹೇಳಿಕೆಗಳ ಬಗ್ಗೆ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ." ಐತಿಹಾಸಿಕ ವಾಸ್ತವಾಂಶಗಳನ್ನು ಕಡೆಗಣಿಸಿ ಭಾರತ ನೀಡಿರುವ ಹೇಳಿಕೆಗಳ ಬಗ್ಗೆ ನಾವು ತೀವ್ರ ಅಸಮಾಧಾನ ಹೊಂದಿದ್ದೇವೆ" ಎಂದು ಚೀನಾದ ವಿದೇಶಾಂಗ ಖಾತೆಯ ವಕ್ತಾರ ಕ್ವಿನ್ ಗಾಂಗ್ ಹೇಳಿದ್ದಾರೆ. ಪ್ರಣಬ್ ಮುಖರ್ಜಿ ಅವರು ಭಾನುವಾರಂದಂದು ನೀಡಿದ್ದ "ಚೀನಾ ಹಕ್ಕು ಸ್ಥಾಪಿಸಲು ಪ್ರಯತ್ನಸುತ್ತಿರುವ ಅರುಣಾಚಲ ಪ್ರದೇಶ ಭಾರತದ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಇದು ಚೀನಾಕ್ಕೂ ತಿಳಿದಿದೆ" ಎಂಬ ಹೇಳಿಕೆಯ ಬಗ್ಗೆ ಕ್ವಿನ್ ಪ್ರತಿಕ್ರಿಯೆ ನೀಡುತ್ತಿದ್ದರು." ಚೀನಾ ಯಾವಾಗಲೂ ಅರುಣಾಚಲ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ, ಆದರೆ ಅರುಣಾಚಲ ಪ್ರದೇಶ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಹೊಂದಿದೆ" ಎಂದು ಮುಖರ್ಜಿ ಹೇಳಿದ್ದರು.ಈ ಮೊದಲು ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾಗಲೂ 'ಇದು ನಮ್ಮ ಸೂರ್ಯೋದಯದ ನಾಡು' ಎಂದು ಹೇಳಿದ್ದರು.ವಿವಾದಿತ ಗಡಿ ಪ್ರದೇಶದ ಬಗ್ಗೆ ಬಹುಕಾಲದ ಸಂಧಾನ ಮಾತುಕತೆಯಲ್ಲಿ ತೊಡಗಿದ್ದ ಎರಡು ರಾಷ್ಟ್ರಗಳ ನಡುವೆ 1962ರಲ್ಲಿ ಈ ವಿಷಯಕ್ಕೆ ಕುರಿತಂತೆ ರಕ್ತಪಾತ ಹರಿಸಿದ ಯುದ್ದವೂ ನಡೆದಿತ್ತು.ಎರಡೂ ರಾಷ್ಟ್ರಗಳು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಬಯಸುತ್ತವಾದರೂ, "ಅರುಣಾಚಲ ಪ್ರದೇಶ ಅಥವಾ ಅದರ ಯಾವುದೇ ಭಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಬರುವುದಿಲ್ಲ" ಎಂದು ಮುಖರ್ಜಿ ಸ್ಪಷ್ಟವಾಗಿ ಹೇಳಿದ್ದರು.ಆದರೆ ಕ್ವಿನ್ ಅವರು ಆಧಿಕೃತ ಗಡಿರೇಖೆಯನ್ನು ಇನ್ನಷ್ಟೇ ನಿರ್ಧರಿಸಬೇಕಾಗಿದೆ ಎಂದು ಹೇಳಿದ್ದಾರೆ.ಭಾರತ ಪ್ರಕಾರ ಗಡಿಯಾಗಿರುವ ಮಾಕ್‌ಮಹೋನ್ ಬಾರ್ಡರ್ ಲೈನ್ ಬಗ್ಗೆಪ್ರಸ್ತಾಪಿಸಿರುವ ಅವರು, "ಚೀನಾದ ಪ್ರಸ್ತುತ ಸರಕಾರವಾಗಲಿ ಅಥವಾ ಯಾವುದೇ ಹಿಂದಿನ ಸರಕಾರವಾಗಲಿ ಕಾನೂನುಬದ್ಧವಲ್ಲದ ಮಾಕ್‌ಮಹೋನ್ ಗಡಿರೇಖೆಯನ್ನು ಒಪ್ಪಿಕೊಂಡಿಲ್ಲ" ಎಂದು ಕ್ವಿನ್ ಹೇಳಿದ್ದಾರೆ. ಭಾರತದ ಪ್ರಕಾರ ಚೀನಾ ಹಿಮಾಲಯ ಪ್ರದೇಶದ 43.180 ಚದರ ಕಿಲೊಮೀಟರ್ ಪ್ರದೇಶವನ್ನು ಆಕ್ರಮಿಸಿಕೊಂಡಿದೆ, ಮತ್ತು ಭಾರತ 90,000 ಚದರ ಕಿಲೊಮೀಟರ್ ಅಂದರೆ ಪೂರ್ಣ ಅರುಣಾಚಲ ಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ ಎಂಬುದು ಚೀನಾ ಅರೋಪ. |