ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬರಾಕ್ ಒಬಾಮಾರ ಅಫ್ಘಾನ್ ಯೋಜನೆಯಲ್ಲಿನ ಬದಲಾವಣೆಯ ಕೋರಿಕೆಗೆ ಮಂಗಳವಾರ ಬ್ರಿಟನ್ ಪ್ರತಿಕ್ರಿಯಿಸುತ್ತಾ, ಅಫ್ಘಾನ್‌ನಲ್ಲಿ ಮತ್ತಷ್ಟು ಸೇನೆಯನ್ನು ರವಾನಿಸಲು ತಾನು ಸಿದ್ದವಿರುವುದಾಗಿ ಮುನ್ಸೂಚನೆ ನೀಡಿದೆ.
ಸೈನ್ಯವನ್ನು ನಿಯೋಜಿಸುವ ಪಾಲುದಾರಿಕೆಯ ಅಂಗವಾಗಿ ಅಫ್ಘಾನ್‌ನ ಸ್ಥಿತಿಗತಿಗನುಸಾರವಾಗಿ ಸೇನೆಯನ್ನು ರವಾನಿಸಲಾಗುವುದು ಎಂದು ಬ್ರಿಟಿನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಟೋ ಕೂಟದಲ್ಲಿ 41 ಸದಸ್ಯ ರಾಷ್ಟ್ರಗಳಿದ್ದು, ಈ ದೇಶಗಳೆಲ್ಲವು ತಮ್ಮ ತಮ್ಮ ಪಾಲುದಾರಿಕೆಯನ್ನು ಸರಿಯಾಗಿ ನಿರ್ವಹಿಸುದಲ್ಲದೆ ಯಂತ್ರೋಪಕರಣ ಮತ್ತು ಅಫ್ಘಾನ್ ಮಾನವ ಸಂಪನ್ಮೂಲಕ್ಕೆ ಅನುಗುಣವಾಗಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಬೇಕೆಂದು ಪ್ರಧಾನಿಯವರು ಹೇಳಿದರು.
ಹೆಚ್ಚಿನ ಸಂಖ್ಯೆಯ ಸೈನ್ಯವನ್ನು ಇರಾಕ್‌ನಿಂದ ಅಫ್ಘಾನಿಸ್ತಾನದಲ್ಲಿ ನಿಯೋಜಿಸಿ ಒಬಾಮಾರ ಕೋರಿಕೆಯನ್ನು ನೆರವೇರಿಸಿ ಕೊಡಲಾಗುವುದೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಅಫ್ಘಾನ್‌ನಲ್ಲಿ ಬ್ರಿಟನ್‌ನ 8,000 ಸೈನ್ಯದಳವಿದೆ ಎಂದು ತಿಳಿಸಿದರು.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಒಬಾಮಾ ಅವರು ಅಫ್ಘಾನ್‌ನಲ್ಲಿರುವ ಯುಸ್ ಸೈನ್ಯ ಬಲವನ್ನು ಹೆಚ್ಚಿಸುವ ಮುನ್ಸೂಚನೆ ನೀಡಿದ್ದರಲ್ಲದೆ, ಇರಾಕ್‌ನಲ್ಲಿರುವ ಸೈನ್ಯವನ್ನು ಹಂತ,ಹಂತವಾಗಿ ಹಿಂತೆಗೆಯುವುದಾಗಿ ಭರವಸೆ ನೀಡಿದ್ದರು. |