ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಆಡಳಿತಾವಧಿಯಲ್ಲಿನ ವಿದೇಶಿ ನೀತಿಯನ್ನು ಬದಲಾವಣೆಗೊಳಿಸಬೇಕು ಅಲ್ಲದೇ ಅಫ್ಘಾನ್ ಮತ್ತು ಇರಾಕ್‌ನಲ್ಲಿರುವ ಅಮೆರಿಕ ಸೇನೆಯನ್ನು ವಾಪಸು ಕರೆಯಿಸಿಕೊಳ್ಳಲು ನಿಯೋಜಿತ ಅಧ್ಯಕ್ಷ ಒಬಾಮ ಮುಂದಾಗಬೇಕು ಎಂದು ತಾಲಿಬಾನ್ ತಾಕೀತು ಮಾಡಿದೆ.
ಬುಷ್ ಆಡಳಿತಾವಧಿಯಲ್ಲಿ ಅನುಸರಿಸುತ್ತಿದ್ದ ವಿದೇಶಾಂಗ ನೀತಿಯನ್ನು ನಿಯೋಜಿತ ನೂತನ ಅಧ್ಯಕ್ಷ ಬರಾಕ್ ಒಬಾಮ ಅವರು ಬದಲಾವಣೆಗೊಳಿಸಬೇಕು ಎಂದು ತಾಲಿಬಾನ್ ವೆಬ್‌ಸೈಟ್‌ವೊಂದರ ಸಂದೇಶದಲ್ಲಿ ತಿಳಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಆ ನಿಟ್ಟಿನಲ್ಲಿ ಬರಾಕ್ ಅವರ ಐತಿಹಾಸಿಕ ವಿಜಯ, ಇರಾಕ್ ಮತ್ತು ಅಫ್ಘಾನ್‌ಗಳಲ್ಲಿ ನಡೆಸುತ್ತಿರುವ ಮಾನವ ವಿರೋಧಿ ಯುದ್ಧ ನೀತಿಯನ್ನು ನಿಲ್ಲಿಸುವ ನಿಲುವು ಕೈಗೊಳ್ಳಬೇಕಾಗಿದೆ ಎಂದು ತಾಲಿಬಾನ್ ಇಚ್ಚೆ ವ್ಯಕ್ತಪಡಿಸಿದೆ.
ಒಬಾಮ ಅವರು ಬುಷ್ ಅವರ ನೀತಿಗೆ ಅಂತ್ಯ ಹಾಡುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ, ಆ ನಿಟ್ಟಿನಲ್ಲಿ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದೆ.
ಏತನ್ಮಧ್ಯೆ ಒಬಾಮ ಅವರು, ಅಫ್ಘಾನಿಸ್ತಾನದಲ್ಲಿ ಮತ್ತಷ್ಟು ಹೆಚ್ಚಿನ ಸೇನೆಯನ್ನು ನಿಯೋಜಿಸುವುದಾಗಿ ಹೇಳಿರುವ ಹೇಳಿಕೆಯನ್ನು ತಾಲಿಬಾನ್ ತೀವ್ರವಾಗಿ ಖಂಡಿಸಿದೆ. |