ರಾಜಕೀಯ ಸೇರುವ ಇಚ್ಚೆ ವ್ಯಕ್ತಪಡಿಸಿದ್ದ ಪಾಕಿಸ್ತಾನದ ಮಾಜಿ ಜನರಲ್ ಪರ್ವೇಜ್ ಮುಶರ್ರಫ್ ಇದೀಗ ಎರಡು ವಾರಗಳ ನಂತರ, ತನ್ನ ನಿಲುವನ್ನು ಬದಲಾಯಿಸಿದ ಅವರು, ಪಿಎಂಎಲ್‌ಕ್ಯೂ ಪಕ್ಷದ ಅಧ್ಯಕ್ಷನಾಗುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಅವರು ಸಕ್ರಿಯವಾಗಿ ರಾಜಕೀಯ ಸೇರುವ ನಿಟ್ಟಿನಲ್ಲಿ, ತನ್ನ ಬೆಂಬಲಿಗರಲ್ಲಿ ಆಡಳಿತದ ಪಕ್ಷವನ್ನು ಸೋಲಿಸಿಅಧಿಕಾರಕ್ಕೇರಲು ಪಿಎಮ್‌ಎಲ್-ಕ್ಯೂ ಪಕ್ಷದಲ್ಲಿ ಸರಿಯಾದ ವೇದಕೆಯೊಂದನ್ನು ಒದಗಿಸಿಕೊಡಬೇಕು ಎಂದಿದ್ದರು.
ಭವಿಷ್ಯದಲ್ಲಿ ದೇಶದ ಸ್ಥಿತಿಗತಿಗನುಸಾರವಾಗಿ ರಾಜಕೀಯ ಮರುಪ್ರವೇಶದ ಬಗ್ಗೆ ಮರು ಚಿಂತನೆ ನಡೆಸುವುದಾಗಿ ಅವರು ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಹೇಳಿಕೆಯೊಂದನ್ನು ನೀಡಿರುವುದಾಗಿ ಡೈಲಿ ಟೈಮ್ಸ್ ವರದಿ ತಿಳಿಸಿದೆ.
ಆಡಳಿತರೂಢ ಪಾಕ್ ಸರ್ಕಾರಕ್ಕಿಂತ ಮುಶರ್ರಫ್ ಅಧಿಕಾರವು ಉತ್ತಮವಾಗಿದೆ ಎಂಬ ಸತ್ಯಾಂಶವನ್ನು ಜನರು ಬಹುಬೇಗನೆ ಅರಿತುಕೊಳ್ಳಲಿದ್ದಾರೆ ಎಂದು ಮುಶ್ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಮುಂದಿನ ಮೂರು ತಿಂಗಳೊಳಗೆ ದೇಶದ ರಾಜಕೀಯ ಸ್ಥಿತಿಗತಿಯು ಬದಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈಗಿನ ಬೆಳವಣಿಗೆ ಪರಿಶೀಲಿಸಿದರೆ ಅಂತಹ ಸಾಧ್ಯತೆ ಕಡಿಮೆ ಎಂದು ತಿಳಿಸಿದರು. |