ನೂತನ ತಂತ್ರಜ್ಞಾನ ಹೊಂದಿರುವ ಖಂಡಾಂತರ ಕ್ಷಿಪಣಿಯನ್ನು ಬುಧವಾರ ಯಶಸ್ವಿಯಾಗಿ ಉಡ್ಡಯನ ಮಾಡಿರುವುದಾಗಿ ಇರಾನ್ ರಕ್ಷಣಾ ಸಚಿವ ಮೊಸ್ತಾಫಾ ಮೊಹಮ್ಮದ್ ನಾಜ್ಜಾರ್ ತಿಳಿಸಿದ್ದಾರೆ.
ಸಾಜ್ಜಿಲ್ ಹೆಸರಿನ ನೂತನ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡ್ಡಯನಗೊಳಿಸಿರುವುದಾಗಿ ನಾಜ್ಜಾರ್ ದೂರದರ್ಶನದಲ್ಲಿ ಮಾತನಾಡುತ್ತ ಹೇಳಿದರು.
ಅತಿ ವೇಗದ ಸಾಜ್ಜಿಲ್ ಕ್ಷಿಪಣಿಯನ್ನು ಏರೋಸ್ಪೇಸ್ ನಿರ್ಮಿಸಿದ್ದು, ಅದನ್ನು ಇಂದು ಉಡ್ಡಯನ ಮಾಡಿರುವುದಾಗಿ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಆದರೆ ಮಿಸೈಲ್ ಅನ್ನು ಯಾವ ಪ್ರದೇಶದಲ್ಲಿ ಉಡ್ಡಯನ ಮಾಡಲಾಯಿತು ಎಂಬ ವಿವರನ್ನು ಅವರು ನೀಡಿಲ್ಲ, ಎರಡು ಇಂಧನಗಳ ಎಂಜಿನ್ ಹೊಂದಿರುವ ಈ ಕ್ಷಿಪಣಿ, ಉತ್ತಮ ಸಾಮರ್ಥ್ಯವನ್ನು ಹೊಂದಿರುವುದಾಗಿ ಹೇಳಿದರು. |