ನೇಪಾಳದ ಪ್ರಧಾನಿ ಪುಷ್ಪ ಕಮಾಲ್ ದಹಾಲ್ ಆಲಿಯಾಸ್ ಪ್ರಚಂಡ ಅವರು ಎರಡನೇ ಸುತ್ತಿನ ಭೇಟಿಯ ಅಂಗವಾಗಿ ಬುಧವಾರ ಮತ್ತೆ ಭಾರತಕ್ಕೆ ಆಗಮಿಸಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಅವರು ಭಾರತಕ್ಕೆತನ್ನ ಮೊದಲಿನ ಭೇಟಿಯನ್ನು ನೀಡಿದ್ದರು.
12 ಮಂದಿಯ ಪ್ರತಿನಿಧಿಗಳ ತಂಡದೊಂದಿಗೆ ಭೇಟಿ ನೀಡಿದ ಮಾಜಿ ಗೆರಿಲ್ಲಾಪಡೆ ಮುಖ್ಯಸ್ಥ ಬಿಐಎಮ್‌ಎಸ್‌ಟಿಇಸಿಯ ಎರಡನೇ ಸುತ್ತಿನ ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಮಾವೋವಾದಿ ಮಾಜಿ ನಾಯಕ ಸಂಜೆ ನವದೆಹಲಿ ತಲುಪಿದ್ದು, ತದನಂತರ ಅವರು ಪ್ರಧಾನಿ ಮನ್‌ಮೋಹನ್ ಸಿಂಗ್‌ರೊಂದಿಗೆ ದ್ವಿಪಕ್ಷೀಯ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಗುರುವಾರದಂದು ನಡೆಯುವ ಬಿಐಎಮ್‌ಎಸ್‌ಟಿಇಸಿಯ ಮಾತುಕತೆಯ ನಂತರ ಅವರು ಥಾಯ್‌ಲ್ಯಾಂಡ್ ಪ್ರಧಾನಿ ಸೋಮ್‌ಚೆ ವಿಂಗ್‌ಸಾವತ್ ಅವರನ್ನು ಭೇಟಿ ಮಾಡಲಿದ್ದಾರೆ.
ಉತ್ತರಖಂಡ್‌ನ ರಾಜಧಾನಿಯಾದ ಡೆಹ್ರಾಡೂನ್‌ಗೆ ಶುಕ್ರವಾರದಂದು ಪ್ರಚಂಡ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ತೆಹ್ರಿ ಅಣೆಕಟ್ಟಿನ ವೀಕ್ಷಣೆ ನಡೆಸಲಿದ್ದು, ಭೇಟಿಯ ವೇಳೆಯಲ್ಲಿ ಭಾರತ ಸರಕಾರವು ತೆಹ್ರಿ ಅಣೆಕಟ್ಟಿನ ನಿರ್ಮಾಣದಲ್ಲಿ ನೇಪಾಳದ ಆತಂಕವನ್ನು ನಿವಾರಿಸಲು ಪ್ರಯತ್ನಿಸಲಿದೆ.
ತೆಹ್ರಿ ಅಣೆಕಟ್ಟು ಭಾರತ ಮತ್ತು ನೇಪಾಳದ ಹೈಡ್ರೋಪವರ್ ಯೋಜನೆಯ ಭಾಗವಾಗಿದೆ. ನೇಪಾಳ ವಿದೇಶಾಂಗ ಸಚಿವ ಉಪೇಂದ್ರ ಯಾದವ್ ಪ್ರಚಂಡ ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. |