ಮಾತಿನ ಚಕಮಕಿಯಿಂದ ರೋಸಿಹೋದ 15ರ ಹರೆಯದ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಗೆ ಗುಂಡನ್ನು ಹೊಡೆದು ಹತ್ಯೆಗೈದಿರುವ ಘಟನೆ ಇಲ್ಲಿನ ಹೈಸ್ಕೂಲ್‌ನಲ್ಲಿ ನಡೆದಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹ್ ವಿಂಬರ್ಲಿ(15) ಮೇಲೆ ಶಾಲಾ ಆವರದೊಳಗೆ ಆಕ್ರಮವಾಗಿ ಆಯುಧ ತಂದ ಹಾಗೂ ಹತ್ಯೆಗೈದ ಆರೋಪದ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಡಿಲ್ಲಾರ್ಡ್ ಹೈಸ್ಕೂಲ್‌ನಲ್ಲಿ ವಿಂಬರ್ಲಿ ಮತ್ತು ಅಮಾಂದಾ ಕೊಲ್ಲೆಟ್ಟೆ(15) ಇಬ್ಬರು ಮಾತಿನ ಚಕಮಕಿಯಲ್ಲಿ ನಿರತರಾಗಿದ್ದಾಗ, ಪರಿಸ್ಥಿತಿ ವಿಕೋಪಕ್ಕೆ ಹೋದಾಗ ವಿಂಬರ್ಲಿ ಗನ್‌ನಿಂದ ಶೂಟ್ ಮಾಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ಶಾಲಾ ಆವರದಲ್ಲಿಯೇ ಇಂತಹ ಘಟನೆ ನಡೆದಿದ್ದನ್ನು ನೋಡಿ ನಮ್ಮ ಹೃದಯ ಒಡೆದೇ ಹೋದಂತೆ ಅನುಭವವಾಗಿದೆ ಎಂದು ಶಾಲೆಯ ಸೂಪರಿಟೆಂಡೆಂಟ್ ಜಿಮ್ ನೋಟ್ಟೆರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗನ್‌ನಿಂದ ಶೂಟ್ ಮಾಡಿದ ವಿಂಬರ್ಲಿ ಏನೂ ನಡೆದೇ ಇಲ್ಲ ಎಂಬಂತೆ ಕ್ಯಾಂಪಸ್‌ನಿಂದ ನೇರವಾಗಿ ರೆಸ್ಟೋರೆಂಟ್‌ಗೆ ನಡೆದು ಹೋಗಿ, ಅಧಿಕಾರಿಗಳನ್ನು ಕರೆದು ತಾನು ಶೂಟ್ ಮಾಡಿರುವುದಾಗಿ ತಿಳಿಸಿರುವುದಾಗಿ ಪೊಲೀಸ್ ವಕ್ತಾರ ಫ್ರಾಂಕ್ ಸೌಸಾ ತಿಳಿಸಿದ್ದಾರೆ. ಬಳಿಕ ಆಕೆಯನ್ನು ರೆಸ್ಟೋರೆಂಟ್‌ನಲ್ಲಿ ಬಂಧಿಸಿ, ಗನ್ ವಶಪಡಿಸಿಕೊಳ್ಳಲಾಯಿತು.
ಆದರೆ ಆಕೆ ರೀತಿ ಕೂಗಿ ಹೇಳುತ್ತಿದ್ದರೂ ಕೂಡ ಯಾರೂ ಆಕೆಯ ಮಾತನ್ನು ನಂಬಿರಲಿಲ್ಲ, ನಂತರ ವಿಷಯ ತಿಳಿದ ಮೇಲೆ ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. |