ಪರಮಾಣು ಶಸ್ತ್ರಾಸ್ತ್ರ ಕಡಿತ ಒಪ್ಪಂದ ಮಾಡಲು 1991ರಲ್ಲಿ ಅಮೆರಿಕ ಮತ್ತು ರಷ್ಯಾ ಮಹತ್ವದ "ಸ್ಟಾರ್ಟ್" ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಮುಂದುವರಿಕೆಯಂತೆ ಈ ಎರಡು ದೇಶಗಳು ಜಿನೆವಾದಲ್ಲಿ ಮಾತುಕತೆಯನ್ನು ಆರಂಭಿಸಿರುವುದಾಗಿ ಅಧಿಕಾರಿ ಮೂಲವು ತಿಳಿಸಿವೆ.
ಜಿನೆವಾದ ಅಮೆರಿಕ ಮತ್ತು ರಷ್ಯಾ ರಾಜ ತಾಂತ್ರಿಕ ಕಚೇರಿಯಲ್ಲಿ ಗುರುವಾರ ಮಾತುಕತೆ ಆರಂಭಗೊಂಡಿದ್ದು, ನವೆಂಬರ್ 21ರವರೆಗೆ ಚರ್ಚೆ ಮುಂದುವರಿಯಲಿದೆ ಎಂದು ಅಮೆರಿಕದ ಅಧಿಕಾರಿ ಮೂಲಗಳು ಹೇಳಿವೆ.
"ಸ್ಟಾರ್ಟ್" ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮತ್ತು ರಷ್ಯಾ ಅಧ್ಯಕ್ಷ ಮೈಕೇಲ್ ಎಸ್ ಗೋರ್ಬಚೆವ್ ಅವರು ಸಹಿ ಹಾಕಿದ್ದರು. ಈ ಒಪ್ಪಂದದಿಂದ ಎರಡು ದೇಶಗಳ ಶಸ್ತ್ರಾಗಾರದಿಂದ ಅಣ್ವಸ್ತ್ರ ಸ್ಫೋಟಕ ವಸ್ತುಗಳನ್ನು 6,000ರಷ್ಟು ಕಡಿತಗೊಳಿಸಲು ಕಡಿಮೆ ಮಾಡಲು ಒಪ್ಪಂದ ಮಾಡಿಕೊಂಡಿವೆ.
ಇದರಿಂದ ಎರಡು ದೇಶಗಳ ಶಸ್ತ್ರಾಗಾರಗಳಲ್ಲಿ ನಾಲ್ಕನೇ ಒಂದಂಶ ಪರಮಾಣು ಶಸ್ತ್ರಾಸ್ತರ ಕಡಿಮೆಯಾಗಿದೆ. ಈ ಒಪ್ಪಂದವು 2009 ಡಿಸೆಂಬರ್ 5ಕ್ಕೆ ಮುಕ್ತಾಯಗೊಳ್ಳಲಿದೆ. |