ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಫ್ಘಾನ್: ಆತ್ಮಾಹುತಿ ದಾಳಿಗೆ 10 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಫ್ಘಾನ್: ಆತ್ಮಾಹುತಿ ದಾಳಿಗೆ 10 ಬಲಿ
ಪೂರ್ವ ಅಫ್ಘಾನಿಸ್ಥಾನದ ಅಮೆರಿಕ ಸೇನಾಪಡೆಯನ್ನು ಗುರಿಯಾಗಿಸಿಕೊಂಡು ಗುರುವಾರ ಆತ್ಮಾಹುತಿದಳ ನಡೆಸಿದ ಬಾಂಬ್ ದಾಳಿಗೆ ಹತ್ತು ಅಫ್ಘಾನ್ ನಾಗರಿಕರು ಬಲಿಯಾಗಿದ್ದು, 55 ಮಂದಿ ಗಾಯಾಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಆತ್ಮಾಹುತಿ ಬಾಂಬ್ ದಾಳಿಯು ಪೂರ್ವ ನಂಗರ್ರ್‌ಹರ್ ಪ್ರಾಂತ್ಯದ ರಾಜಧಾನಿಯಾದ ಜಲಾಲ್‌ಬಾದ್‌ನ ಹೊರವಲಯದಲ್ಲಿ ಸಂಭವಿಸಿದೆ.

ಅಫ್ಘಾನ್‌ನಲ್ಲಿ ನೆಲೆನಿಂತಿರುವ ಅಮೆರಿಕ, ಅಫ್ಘಾನ್ ಮತ್ತು ಇತರ ವಿದೇಶಿ ಸೈನ್ಯವನ್ನು ಹತ್ತಿಕ್ಕಲು ತಾಲಿಬಾನ್ ಉಗ್ರಗಾಮಿಗಳು ನಿರಂತರವಾಗಿ ಕಾರ್ ಬಾಂಬ್ ದಾಳಿ ಮತ್ತು ಆತ್ಮಾಹುತಿ ಬಾಂಬ್ ದಾಳಿಯನ್ನು ನಡೆಸುತ್ತಿದೆಯಲ್ಲದೆ, ತನ್ನ ಮುಖ್ಯ ಯುದ್ಧ ತಂತ್ರವನ್ನಾಗಿ ಮಾರ್ಪಾಡುಗೊಳಿಸಿದೆ.

ದಕ್ಷಿಣ ಅಫ್ಘಾನಿಸ್ಥಾನದಲ್ಲಿ ಬುಧವಾರ ದಾಳಿಕೋರರು ಟ್ರಕ್‌ನಲ್ಲಿ ಇರಿಸಲಾಗಿದ್ದ ಬಾಂಬ್‌ವೊಂದು ಸ್ಫೋಟಗೊಂಡು ಆರು ಮಂದಿ ಹತರಾಗಿದ್ದು 42 ಮಂದಿ ಗಾಯಾಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪರಮಾಣು: ಅಮೆರಿಕ-ರಷ್ಯಾ ಮಾತುಕತೆ
ಪಾಕಿಸ್ತಾನ: ಇರಾನ್ ರಾಯಭಾರಿ ಅಪಹರಣ
ಪ್ಲೋರಿಡಾ: ಸಹಪಾಠಿಗೆ ವಿದ್ಯಾರ್ಥಿನಿಯಿಂದ ಗುಂಡು
ಪ್ರಚಂಡ ಭಾರತಕ್ಕೆ ಮತ್ತೆ ಭೇಟಿ
ಇರಾನ್‌ನಿಂದ ನೂತನ ಕ್ಷಿಪಣಿ ಪರೀಕ್ಷೆ
ಪಿಎಮ್‌ಎಲ್-ಕ್ಯೂ ಪಕ್ಷದ ನೇತೃತ್ವ ಬೇಡ : ಮುಶರ್ರಫ್