ಮ್ಯಾನ್ಮಾರ್‌ನಲ್ಲಿ ಸೇನಾ ಆಳ್ವಿಕೆಯ ವಿರುದ್ಧ ರಾಜಕೀಯ ನಾಯಕರ ನೇತೃತ್ವದೊಂದಿಗೆ ಸಾರ್ವಜನಿಕರು ನಡೆಸಿದ ಪ್ರತಿಭಟನೆಯಲ್ಲಿ ಅನೇಕ ಮಂದಿ ರಾಜಕೀಯ ನೇತಾರರನ್ನು ದೀರ್ಘಾ ಕಾಲದ ಜೈಲು ಶಿಕ್ಷೆಗೊಳಪಡಿಸಿದ್ದು, ಇವರೆಲ್ಲರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕೆಂದು ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಆಡಳಿತ ಮ್ಯಾನ್ಮಾರ್ ಮಿಲಿಟರಿ ಸರಕಾರದೊಡನೆ ಮನವಿ ಮಾಡಿಕೊಂಡಿದ್ದಾರೆ.
ಮ್ಯಾನ್ಮಾರ್ ಸೈನ್ಯಡಾಳಿತವು ಬಂಧಿಯಾಗಿರಿಸಿರುವ ರಾಜಕೀಯ ನೇತಾರರನ್ನು ಬಿಡುಗಡೆಗೊಳಿಸುವಂತೆ, ಭವಿಷ್ಯದ ಮ್ಯಾನ್ಮಾರ್ ರಾಜಕೀಯದಲ್ಲಿ ಸಾಮಾನ್ಯ ಜನರಿಗೆ ಮುಕ್ತವಾಗಿ ಸ್ಪರ್ಧಿಸಲು ಅವಕಾಶ ನೀಡಬೇಕು ಮತ್ತು ಸರಕಾರವು ರಾಷ್ಟ್ರೀಯ ಸಾಮರಸ್ಯದ ಕಾರ್ಯವಿಧಾನವನ್ನು ಅನುಸರಿಸುವಂತೆ ಮನವಿ ಕಿವಿಮಾತು ಹೇಳಿದ್ದಾರೆ.
2007ರ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗಿಯಾದವರ ವಿರುದ್ಧ ನ್ಯಾಯವಲ್ಲದ ತೀರ್ಪು ನಡೆದಿದ್ದು, ಇವರನ್ನು ಕೂಡಲೇ ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸುವಂತೆ ಅಂತಾರಾಷ್ಟ್ರೀಯ ಮಾನವ ಹಕ್ಕು ಸಮಿತಿಯು ನಿರ್ದೇಶಿಸಿದೆ. |