ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೆನೆಟ್ ಸದಸ್ಯತ್ವಕ್ಕೆ ಬರಾಕ್ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೆನೆಟ್ ಸದಸ್ಯತ್ವಕ್ಕೆ ಬರಾಕ್ ರಾಜೀನಾಮೆ
ND
ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ ಅವರು ಸೆನೆಟ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಇಲ್ಲಿನೊಯ್ಸ್ ಕ್ಷೇತ್ರದಿಂದ ತನ್ನನ್ನು ಅಮೆರಿಕ ಸೆನೆಟ್‌ಗೆ ಆಯ್ಕೆಗೊಳಿಸಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವ ಜನರಿಗೆ ಕೃತಜ್ಞತೆ ಅರ್ಪಿಸುವುದಾಗಿ ತಿಳಿಸಿರುವ ಒಬಾಮ, ಇದು ತನಗೆ ದೊರೆತ ಅತ್ಯನ್ನತ ಗೌರವವಾಗಿದೆ ಎಂದು ಪ್ರಕಟಣೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಶಾಲಿಯಾಗಿ, ಅಧ್ಯಕ್ಷ ಪಟ್ಟ ಅಲಂಕರಿಸಲಿರುವ ಬರಾಕ್ ಒಬಾಮ ಅವರು ಭಾನುವಾರದಿಂದ ಅನ್ವಯವಾಗುವಂತೆ, ತಮ್ಮ ಸೆನೆಟ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಇಲ್ಲಿಯವರೆಗೂ ಇಲ್ಲಿನೊಯ್ಸ್ ಕ್ಷೇತ್ರದ ಜನರ ಸುಖ-ಕಷ್ಟಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿದ್ದೇನೆ, ಆದರೆ ಇದೀಗ ಅಮೆರಿಕದ ಅಧ್ಯಕ್ಷ ಪಟ್ಟ ಅಲಂಕರಿಸುವ ಮೂಲಕ ಇಡೀ ದೇಶದ ಜನಸಾಮಾನ್ಯರ ಕನಸನ್ನು ನನಸು ಮಾಡುವ ಗುರುತರ ಜವಾಬ್ದಾರಿ ತನ್ನ ಮೇಲಿದೆ ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬರಾಕ್ ಒಬಾಮಾ ಅವರು ಜನವರಿ 9ರಂದು ಸೆನೆಟ್‌ನಲ್ಲಿ ಡೆಮೋಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಮತಚಲಾಯಿಸುವ ಮೂಲಕ ಅಧಿಕೃತ ಆಯ್ಕೆಯನ್ನು ಘೋಷಿಸಲಾಗುವುದು. ನಂತರ ಜನವರಿ 20ರಂದು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮ್ಯಾನ್ಮಾರ್‌ : ರಾಜಕೀಯ ಕೈದಿಗಳ ಬಿಡುಗಡೆಗೆ ಆಗ್ರಹ
ತೈಪೆ: ಜೈಲಿನಲ್ಲಿ ಮಾಜಿ ಅಧ್ಯಕ್ಷನ ಉಪವಾಸ ಸತ್ಯಾಗ್ರಹ
ಅಫ್ಘಾನ್: ಆತ್ಮಾಹುತಿ ದಾಳಿಗೆ 10 ಬಲಿ
ಪರಮಾಣು: ಅಮೆರಿಕ-ರಷ್ಯಾ ಮಾತುಕತೆ
ಪಾಕಿಸ್ತಾನ: ಇರಾನ್ ರಾಯಭಾರಿ ಅಪಹರಣ
ಪ್ಲೋರಿಡಾ: ಸಹಪಾಠಿಗೆ ವಿದ್ಯಾರ್ಥಿನಿಯಿಂದ ಗುಂಡು