ತಮಿಳು ಬಂಡುಕೋರರ ವಿರುದ್ಧ ಶ್ರೀಲಂಕಾ ಸೇನಾಪಡೆ ನಡೆಸಿದ ಕಾರ್ಯಚರಣೆಯಲ್ಲಿ 1000ಕ್ಕಿಂತ ಹೆಚ್ಚು ತಮಿಳು ನಾಗರಿಕರು ನಿರಾಶ್ರಿತರಾಗಿದ್ದು, ಮಾನವೀಯತೆಯ ಅಂಗವಾಗಿ ಭಾರತದಿಂದ 1,680 ಟನ್ ಆಹಾರ ಹಾಗೂ ಪರಿಹಾರ ಸಾಮಗ್ರಿಗಳ ಸರಕುಗಳನ್ನು ಲಂಕಾಗೆ ರವಾನಿಸಲಾಗಿದೆ. ಇದು ವಾರಾಂತ್ಯದಲ್ಲಿ ಲಂಕಾವನ್ನು ತಲುಪುವ ನಿರೀಕ್ಷೆಯಲ್ಲಿದೆ.
ಮಾನವೀತೆಯ ನೆರವಿನ ಅಂಗವಾಗಿ ಲಂಕಾಕ್ಕೆ ಭಾರತವು ಕಳೆದ 20 ವರ್ಷಗಳಲ್ಲಿನ ಅತೀ ದೊಡ್ಡ ನೆರವಿನ ಪ್ರಮೂಣದ ನೆರವನ್ನು ಇದಾಗಿದೆ. 2004ರಲ್ಲಿ ಸಾವಿರಾರು ಜನರ ಸಾವಿಗೆ ಕಾರಣವಾದ ಭೀಕರ ಸುನಾಮಿ ದುರಂತಕ್ಕೆ ಪರಿಹಾರ ಕ್ರಿಯೆಯಾಗಿ ಭಾರತ ವೈದ್ಯಕೀಯ ಸಹಾಯ ಹಾಗೂ ಪರಿಹಾರ ಸಾಮೂಗ್ರಿಗಳನ್ನು ಲಂಕಾಕ್ಕೆ ನೀಡಿತ್ತು.
ಲಂಕಾಗೆ ರವಾನಿಸಿಲಾದ ಪರಿಹಾರ ಸಾಮಾಗ್ರಿಗಳನ್ನು ಸರಿಯಾದ ರೀತಿಯಲ್ಲಿಯೇ ತಪಾಸಣೆ ಮಾಡಿ ಕಳುಹಿಸಿಕೊಡಲಾಗಿದ್ದು, ವಾರಾಂತ್ಯದಲ್ಲಿ ಲಂಕಾವನ್ನು ತಲುಪುವ ನಿರೀಕ್ಷೆಯಿದೆಯೆಂದು ಅಧಿಕಾರಿಗಳು ತಿಳಿಸಿದರು.
ಎಲ್‌ಟಿಟಿಇ ಬಂಡುಕೋರರ ವಿರುದ್ಧ ಲಂಕಾ ಸೈನ್ಯವು ಇತ್ತೀಚಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಸುಮೂರು 2 ಲಕ್ಷದಷ್ಟು ತಮಿಳು ನಾಗರಿಕರು ನಿರಾಶ್ರಿತರಾಗಿದ್ದು, ಅಂತಾರಾಷ್ಟ್ರೀಯ ಪರಿಹಾರ ಪ್ರಕ್ರಿಯೆಯ ಅಂಗವಾಗಿ ಭಾರತವು ನೆರವನ್ನು ನೀಡಲಿದೆ. |