ಟಿಬೆಟ್ ಭವಿಷ್ಯದ ಬಗ್ಗೆ ಭಾರತದೊಂದಿಗಿನ ಮಾತುಕತೆಗಾಗಿ ನವೆಂಬರ್ 14ರಂದು ಆರು ದಿವಸದ ಭೇಟಿಗಾಗಿ ದಲೈಲಾಮಾ ಧರ್ಮಶಾಲಾಕ್ಕೆ ಆಗಮಿಸಲಿದ್ದು, ಇದನ್ನು ಭಾರತ ಸರಕಾರವು ತಡೆಯಬೇಕೆಂದು ಚೀನಾ ಗುರುವಾರ ಆಗ್ರಹಿಸಿದೆ.
ಚೀನಾ ವಿರೋಧಿ ಚಟುವಟಿಕೆಗಳಿಗೆ ಭಾರತ ಯಾವತ್ತು ಪ್ರೋತ್ಸಾಹ ನೀಡವುದಿಲ್ಲ ಮತ್ತು ಭಾರತ ಸರಕಾರವು ಈ ವಿಷಯದಲ್ಲಿ ಸತ್ಯನಿಷ್ಠೆಯಿಂದ ಕಾರ್ಯನಿರ್ವಹಿಸಲಿದೆ ಮತ್ತು ಬಹುಬೇಗನೇ ಇದನ್ನು ಕಾರ್ಯರೂಪಕ್ಕೆ ತರಲಿದೆ ಎಂಬ ವಿಶ್ವಾಸ ತನಗಿದೆ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರನಾದ ಕಿನ್ ಗಂಗ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದರು.
ದಲೈಲಾಮಾ ಅವರಿಗೆ ವ್ಯವಸ್ಥೆಗೊಳಿಸಲಾದ ಮಾತುಕತೆಯಲ್ಲಿ ಭಾಗವಹಿಸುವರು ಯಾರೇ ಯಾದರು ಅದು ಚೀನಾದ ದೃಷ್ಟಿಯಿಂದ ಹಿತಕಾರಿಯಲ್ಲ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಮಸ್ಯೆಯನ್ನು ಹೆಚ್ಚಿಸಿ ಚೀನಾದ ಇಬ್ಬಾಗಕ್ಕೆ ಪ್ರಯತ್ನಿಸಿದರೆ ಅವರ ವಿರುದ್ಧ ಚೀನಾ ಸರಕಾರವು ಕ್ರಮವನ್ನು ಕೈಗೊಳ್ಳಲಿದೆಯೆಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದರು.
ಭಾರತ ಸರಕಾರದ ಮೇಲೆ ಒತ್ತಡ ಹೇರಲು ಇಂತಹ ಹೇಳಿಕೆಯನ್ನು ನೀಡಲಾಗುತ್ತಿದ್ದು, ಚೀನಾ ಸರಕಾರವು ವಿಶ್ವವ್ಯಾಪಿ ಬೆಂಬಲ ಹೊಂದಿದ ದಲೈಲಾಮರ ಮಾತುಕತೆಯನ್ನು ತಡೆಯುವುದಕ್ಕಾಗಿ ಇಂತಹ ಹೇಳಿಕೆಯನ್ನು ನೀಡಲಾಗುತ್ತಿದೆ. |