ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ : ಕೆನಡ ಪತ್ರಕರ್ತೆಯ ಅಪಹರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ : ಕೆನಡ ಪತ್ರಕರ್ತೆಯ ಅಪಹರಣ
ಉತ್ತರ ಪಾಕಿಸ್ತಾನದ ಆದಿವಾಸಿ ಪ್ರದೇಶದಲ್ಲಿ ಸಾಕ್ಷ್ಯಚಿತ್ರಕ್ಕಾಗಿ ವಿಷಯ ಸಂಗ್ರಹಣೆಗೆ ತೆರಳಿದ ಕೆನಡಾದ ಪತ್ರಕರ್ತೆಯೊಬ್ಬರನ್ನು ಅಪಹರಿಸಿದ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

53ರ ಹರೆಯದ ಖದೀಜಾ ಅಬ್ದುಲ್ ಕಹಾರ್ ಆಲಿಯಾಸ್ ಬೆವ್ರಲಿ ಗಿಸ್‌ಬ್ರೆಚ್‌ ಎಂಬಾಕೆಯನ್ನು ವಾಯುವ್ಯ ಪಾಕಿಸ್ತಾನದ ಗಡಿ ಪ್ರದೇಶದ ಬನ್ನು ಜಿಲ್ಲೆಯಲ್ಲಿ ಮಂಗಳವಾರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಬಂದೂಕುಧಾರಿ ವ್ಯಕ್ತಿಗಳು ಬೆದರಿಸಿ ಅಪಹರಿಸಿದ್ದರು.

ಪಾಕಿಸ್ತಾನ ಡೈಲಿ ನ್ಯೂಸ್‌ನ ಅಂತಾರಾಷ್ಟ್ರೀಯ ಇಂಗ್ಲೀಷ್ ಆವೃತ್ತಿಯಲ್ಲಿ ಅಪಹರಣ ಘಟನೆಯನ್ನು ಬುಧವಾರ ವರದಿ ಮಾಡಲಾಗಿದ್ದು, ತದನಂತರ ಕೆನಡಾ ಮಾಧ್ಯಮಗಳು ವರದಿಯನ್ನು ಮಾಡಿರುವುದಾಗಿ ಹೇಳಿದೆ.

ಕೆನಡಿಯನ್ ಪತ್ರಿಕೋದ್ಯಮಿಯಾದ ಖದೀಜಾ ಅಬ್ದುಲ್ ಕಹಾರ್ ಅವರೊಂದಿಗೆ ಭಾಷಾ ತರ್ಜುಮೆಗಾರ ಮತ್ತು ಗೈಡ್ ಸೇರಿದಂತೆ ಮೂರು ಮಂದಿ ಉತ್ತರ ವಜಿರಿಸ್ತಾನದ ಮಿರಾಮ್‌ಶಾ ಪ್ರದೇಶಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅನಾಮಿಕ ಬಂದೂಕುಧಾರಿಗಳು ಆಕೆಯನ್ನು ಅಪಹರಿಸಿರುವುದಾಗಿ ಪಾಕಿಸ್ತಾನ ಡೈಲಿ ನ್ಯೂಸ್‌ನ ಅಂತಾರಾಷ್ಟ್ರೀಯ ಆವೃತ್ತಿಯು ವರದಿ ಬಹಿರಂಗಪಡಿಸಿದೆ.

ಕೆನಡಾದ ಅಧಿಕಾರಿಗಳು ಅಪಹೃತ ಪತ್ರಕರ್ತೆಯ ಸುರಕ್ಷಿತ ಬಿಡುಗಡೆಗಾಗಿ ಪಾಕಿಸ್ತಾನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ತೊಡಗಿದ್ದಾರೆ.

ಜಿಲ್ಲೆಯ ಪೊಲೀಸರು ಪ್ರದೇಶವನ್ನು ಸುತ್ತುವರಿದಿದ್ದು ಕೆನಡಿಯನ್ ಪತ್ರಿಕೋದ್ಯಮಿ ಹಾಗೂ ಸಹೋದ್ಯೋಗಿಯ ಶೋಧನೆಯಲ್ಲಿ ತೊಡಗಿದ್ದಾರೆಂದು ಡೈಲಿ ಮಾಧ್ಯಮವು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಲೈಲಾಮಾ ಭಾರತ ಭೇಟಿ ತಡೆಗೆ ಚೀನಾ ಆಗ್ರಹ
ಲಂಕಾ ತಮಿಳು ನಿರಾಶ್ರಿತರಿಗೆ ಭಾರತದಿಂದ ನೆರವು
ಸೆನೆಟ್ ಸದಸ್ಯತ್ವಕ್ಕೆ ಬರಾಕ್ ರಾಜೀನಾಮೆ
ಮ್ಯಾನ್ಮಾರ್‌ : ರಾಜಕೀಯ ಕೈದಿಗಳ ಬಿಡುಗಡೆಗೆ ಆಗ್ರಹ
ತೈಪೆ: ಜೈಲಿನಲ್ಲಿ ಮಾಜಿ ಅಧ್ಯಕ್ಷನ ಉಪವಾಸ ಸತ್ಯಾಗ್ರಹ
ಅಫ್ಘಾನ್: ಆತ್ಮಾಹುತಿ ದಾಳಿಗೆ 10 ಬಲಿ