ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕ: ವಿದೇಶಾಂಗ ಕಾರ್ಯದರ್ಶಿಯಾಗಿ ಹಿಲರಿ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕ: ವಿದೇಶಾಂಗ ಕಾರ್ಯದರ್ಶಿಯಾಗಿ ಹಿಲರಿ ?
PTI
ನಿಯೋಜಿತ ಅಧ್ಯಕ್ಷ ಒಬಾಮಾ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಜಯಗೊಂಡ ಹಿಲರಿ ಕ್ಲಿಂಟನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸುವ ಸಾಧ್ಯತೆ ಇರುವುದಾಗಿ ವರದಿಯೊಂದು ತಿಳಿಸಿದೆ.

ಆದರೆ ವೈಯಕ್ತಿಕ ವ್ಯವಹಾರಗಳ ಕಾರಣಗಳಿಂದ ಹಿಲರಿ ಅವರು ಚಿಕಾಗೋದಲ್ಲಿ ಇದ್ದಿದ್ದು, ಈ ಕುರಿತು ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ ಎಂದು ಹಿಲರಿ ಕಚೇರಿ ಮೂಲಗಳು ಹೇಳಿವೆ.

ಹಿಲರಿ ಅವರು ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರಿಂದ ಅವರಿಂದ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ, ಆದರೆ ಡೆಮೋಕ್ರಟ್ ಪಕ್ಷದ ಮೂಲಗಳ ಪ್ರಕಾರ, ಪಕ್ಷದ ವತಿಯಿಂದ ಹಿಲರಿ ಅವರನ್ನು ಕ್ಯಾಬಿನೆಟ್ ದರ್ಜೆಯ ಹುದ್ದೆಯ ನೀಡುವ ಸಾಧ್ಯತೆ ಇರುವುದಾಗಿ ತಿಳಿಸಿವೆ.

ಏತನ್ಮಧ್ಯೆ ಹಿಲರಿ ಕ್ಲಿಂಟನ್ ಅವರ ಆಯ್ಕೆ ವಿಷಯ ಕುರಿತಾಗಿ ಎಲ್ಲೆಡೆಯಿಂದ ಸ್ವಾಗತ ವ್ಯಕ್ತವಾಗಿರುವುದಾಗಿ ವರದಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ : ಕೆನಡ ಪತ್ರಕರ್ತೆಯ ಅಪಹರಣ
ದಲೈಲಾಮಾ ಭಾರತ ಭೇಟಿ ತಡೆಗೆ ಚೀನಾ ಆಗ್ರಹ
ಲಂಕಾ ತಮಿಳು ನಿರಾಶ್ರಿತರಿಗೆ ಭಾರತದಿಂದ ನೆರವು
ಸೆನೆಟ್ ಸದಸ್ಯತ್ವಕ್ಕೆ ಬರಾಕ್ ರಾಜೀನಾಮೆ
ಮ್ಯಾನ್ಮಾರ್‌ : ರಾಜಕೀಯ ಕೈದಿಗಳ ಬಿಡುಗಡೆಗೆ ಆಗ್ರಹ
ತೈಪೆ: ಜೈಲಿನಲ್ಲಿ ಮಾಜಿ ಅಧ್ಯಕ್ಷನ ಉಪವಾಸ ಸತ್ಯಾಗ್ರಹ