ಅಫ್ಘಾನ್‌ನಲ್ಲಿ ತಾಲಿಬಾನ್ ಉಗ್ರರ ವಿರುದ್ಧ ಹೋರಾಡುವ ಸಲುವಾಗಿ ಸೈನಿಕರ ರವಾನೆಗೆ ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಗೊಂಡ ಬರಾಕ್ ಒಬಾಮ ಬೇಡಿಕೆಯನ್ನಿಟ್ಟಿದ್ದು, ಆ ನಿಟ್ಟಿನಲ್ಲಿ ಹೆಚ್ಚವರಿಯಾಗಿ 2ಸಾವಿರ ಸೈನಿಕರನ್ನು ರವಾನಿಸಲಾಗುವುದೆಂದು ಬ್ರಿಟನ್ ತಿಳಿಸಿದೆ.
ನ್ಯಾಟೋ ಶಕ್ತಿಯನ್ನು ಪ್ರೋತ್ಸಾಹಿಸುವುದಾಕ್ಕಾಗಿ ಅಮೆರಿಕ ಸೇನಾ ರವಾನೆಯ ಬೇಡಿಕೆ ಮುಂದಿಟ್ಟರೆ ಅದನ್ನು ನಿರಾಕರಿಸಲಾಗುವುದಿಲ್ಲವೆಂದು ಬ್ರಿಟಿನ್ ಪ್ರಧಾನಮಂತ್ರಿ ಗೋರ್ಡನ್ ಬ್ರೌನ್ ತಿಳಿಸಿದರು.
ಅಫ್ಘಾನಿಸ್ಥಾನದಲ್ಲಿ ಈಗಾಗಲೇ ಬ್ರಿಟನ್‌ನ 8,000 ಸೈನಿಕರಿದ್ದು, ನ್ಯಾಟೋದ ಇತರ ಸದಸ್ಯ ದೇಶಗಳೊಂದಿಗೆ ಸೈನಿಕರನ್ನು ರವಾನಿಸುವಂತೆಬೇಡಿಕೆಯನ್ನು ಇಡಲಾಗಿತ್ತು.
ಅಫ್ಘಾನ್‌ನಲ್ಲಿ ಮತ್ತಷ್ಟು ಸೇನೆಯನ್ನು ರವಾನಿಸಲು ಒಬಾಮ ತೀರ್ಮಾನ ಕೈಗೊಂಡಿದ್ದು, ಈಗಾಗಾಲೇ ಅಫ್ಘಾನ್‌ನಲ್ಲಿ 30,000 ಅಮೆರಿಕ ಸೈನಿಕರು ಕಾರ್ಯಾಚರಿಸುತ್ತಿದ್ದಾರೆ. ಅಮೆರಿಕವು ಯುರೋಪ್‌ನ ನ್ಯಾಟೋ ಅಂಗ ರಾಜ್ಯಗಳೊಂದಿಗೆ ಮತ್ತಷ್ಟು ಸೇನೆಯ ರವಾನೆಗೆ ಒತ್ತಡ ಹೇರುವ ಸಾಧ್ಯತೆಯಿದೆ.
ಅಫ್ಘಾನಿಸ್ಥಾನದಲ್ಲಿ ಸೇನಾವ್ಯೂಹ ರಚನೆಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲವೆಂದು ಬ್ರಿಟನ್ ರಕ್ಷಣಾ ಸಚಿವಾಲಯದ ವಕ್ತಾರು ತಿಳಿಸಿದ್ದಾರೆ.
|