ಅಮೆರಿಕದಲ್ಲಿ ಜಿ-20ರಾಷ್ಟ್ರಗಳ ಶೃಂಗಸಭೆ ಶನಿವಾರ ಆರಂಭಗೊಂಡಿದ್ದು, ಭಾರತದ ಡಾ.ಮನಮೋಹನ್ ಸಿಂಗ್ ಸೇರಿದಂತೆ ವಿಶ್ವದ ಪ್ರಭಾವಿ ದೇಶಗಳ ಹಲವಾರು ಗಣ್ಯರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಇಂದಿನಿಂದ ಆರಂಭಗೊಂಡಿರುವ ಜಿ-20ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕ ಕುರಿತ ಮತ್ತು ಆರ್ಥಿಕ ಸಮತೋಲನದ ಕುರಿತಾಗಿಯೇ ಪ್ರಮುಖ ಚರ್ಚೆ ನಡೆಯಲಿದೆ ಎಂದು ವಿದೇಶಾಂಗ ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿರುವ ಶೇರುಮಾರುಕಟ್ಟೆಯ ಮೇಲಿನ ಹೊಡೆತವನ್ನು ತಪ್ಪಿಸುವ ಕುರಿತು ಮಹತ್ವದ ಮಾತುಕತೆ ನಡೆಸಲಾಗುತ್ತಿದೆ.
ಈ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಯಾವ ತೆರನಾಗಿ ಪರಿಹರಿಸಬಹುದು ಎಂಬುದೇ ಶೃಂಗಸಭೆಯಲ್ಲಿ ಚರ್ಚಿತವಾಗುವ ಪ್ರಮುಖ ಅಜೆಂಡವಾಗಿದೆ. ಆ ನಿಟ್ಟಿನಲ್ಲಿ ವಿಶ್ವದ ಪ್ರಮುಖ ದೇಶಗಳು ಯಾವ ರೀತಿಯಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಮುಂದಾಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇಂದಿನಿಂದ ಆರಂಭಗೊಂಡಿರುವ ಜಿ.20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಡಾ.ಮನಮೋಹನ್ ಸಿಂಗ್, ವಿತ್ತ ಸಚಿವ ಪಿ.ಚಿದಂಬರಂ ಅವರು ಭಾಗವಹಿಸಿದ್ದಾರೆ. |