ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಲೈಂಗಿಕ ಕಿರುಕುಳ: ಡಿಸೈನರ್ ಆನಂದ್ ದೋಷಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೈಂಗಿಕ ಕಿರುಕುಳ: ಡಿಸೈನರ್ ಆನಂದ್ ದೋಷಿ
ಭಾರತೀಯ ಮೂಲದ ಪ್ರಸಿದ್ಧ ಫ್ಯಾಷನ್ ವಿನ್ಯಾಸಕ ಆನಂದ್ ಜೋನ್‌ಗೆ 7 ಬಾಲಕಿಯರು ಮತ್ತು ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಈತ ರೂಪದರ್ಶಿಯರಾಗುವ ಆಕಾಂಕ್ಷೆಯಿದ್ದ ಮಹಿಳೆಯರಿಗೆ ಲಾಸ್‌ಏಂಜಲ್ಸ್‌ನಲ್ಲಿ ಉದ್ಯೋಗ ಮತ್ತು ಐಷಾರಾಮಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡುವ ಆಮಿಷ ಒಡ್ಡಿ ಕರೆತಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಅಮೆರಿಕದ ಮುಂದಿನ ಉನ್ನತ ರೂಪದರ್ಶಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಆನಂದ್ ಜೋನ್‌ಗೆ ಅತ್ಯಾಚಾರ, ಎರಡು ದುರ್ವರ್ತನೆ ಸೇರಿದಂತೆ 14 ಪಾತಕಗಳಿಗೆ ಶಿಕ್ಷೆ ವಿಧಿಸಲಾಗಿದೆ. 34 ವರ್ಷದ ವಿನ್ಯಾಸಗಾರ ಕಡ್ಡಾಯ ಜೀವಾವಧಿ ಶಿಕ್ಷೆ ಎದುರಿಸಬೇಕಾಗುತ್ತದೆ.

ಅನೇಕ ಮಂದಿಯನ್ನು ಬಲಾತ್ಕರಿಸಿ ದುಷ್ಕೃತ್ಯವೆಸಗಿದ್ದಾನೆಂದು ತೀರ್ಪುಗಾರರು ತಿಳಿಸಿದ್ದಾರೆ.ಆನಂದ್ ವಕೀಲರಾದ ಲ್ಯಾರಿ ಲೆವಿನ್, ಅವನು ನಿರಪರಾಧಿ ಎಂದೇ ವಾದಿಸುತ್ತಿದ್ದು, ದೈಹಿಕ ಸಾಕ್ಷ್ಯಾಧಾರವಿಲ್ಲ ಎಂದು ತಿಳಿಸಿದ್ದಾರಲ್ಲದೇ ಮಹಿಳೆಯರು ಕೋರ್ಟ್‌ನಲ್ಲಿ ಸುಳ್ಳು ಹೇಳಿ ಸೇಡು ತೀರಿಸಿಕೊಂಡಿದ್ದಾರೆಂದು ಹೇಳಿದರು.

ಅನೇಕ ಮಂದಿ ವಿಶ್ವಾಸಾರ್ಹರಾಗಿಲ್ಲ ಎಂದು ಲೆವಿನ್ ಹೇಳಿದ್ದು, ದೌರ್ಜನ್ಯದ ಆರೋಪಗಳ ಬಳಿಕವೂ ಆನಂದ್ ಜತೆ ಸಂಪರ್ಕವಿರಿಸಿಕೊಂಡು ಅವನ ಸೆಲ್‌ಫೋನ್‌ಗೆ ಅನೇಕ ಬಾರಿ ಕರೆಮಾಡಿದ್ದಾರೆಂದು ನುಡಿದಿದ್ದಾರೆ.ತೀರ್ಪು ಹೊರಬೀಳುತ್ತಿದ್ದಂತೆ ಕೋರ್ಟ್‌ರೂಂ ಹೊರಗೆ ಆನಂದ್ ಸ್ನೇಹಿತರು ಮತ್ತು ಬಂಧುಗಳ ಕಣ್ಣಂಚಿನಲ್ಲಿ ನೀರಿನ ಹನಿಗಳು ಉದುರಿದವು.ಆನಂದ್ ಜೋನ್ ಬಂಧನಕ್ಕೆ ಮುಂಚೆ ಕಳೆದ ವರ್ಷ ಟಾಪ್ ಮಾಡೆಲ್ ಎಂದು ಬಿಂಬಿತನಾಗಿದ್ದ.

ಅವನ ವೆಬ್‌ಸೈಟ್‌ನಲ್ಲಿ ಪ್ಯಾರಿಸ್ ಹಿಲ್ಟನ್ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ತನಗೆ ಗ್ರಾಹಕರು ಎಂದು ಪಟ್ಟಿಮಾಡಿದ್ದ .ಮಹಿಳೆಯೊಬ್ಬಳು ತನ್ನ ಮೇಲೆ ಆನಂದ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು 2007 ಮಾರ್ಚ್‌ನಲ್ಲಿ ಪೊಲೀಸರಿಗೆ ದೂರು ನೀಡಿದ ಬಳಿಕ ಬೆವರ್ಲಿ ಹಿಲ್ಸ್ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ಈ ಪ್ರಕರಣ ಸಾಬೀತಾದಲ್ಲಿ ನ್ಯಾಯಾಲಯ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ. 1999ರಲ್ಲಿ ಫ್ಯಾಶನ್ ಜಗತ್ತಿಗೆ ಕಾಲಿಟ್ಟ ಆನಂದ್ ಈ ಉದ್ಯಮದಲ್ಲಿ ಹಲವಾರು ಏರಿಳಿತ ಕಾಣುವ ಮೂಲಕ ಇದೀಗ ಲೈಂಗಿಕ ಕಿರುಕುಳ ಆರೋಪ ಎದುರಿಸುವ ಮೂಲಕ ವಿವಾದಕ್ಕೆ ಈಡಾಗೀದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ: ಭಾರತೀಯನಿಂದ 33ಮಿ.ಡಾಲರ್ ವಂಚನೆ
ವಾಷಿಂಗ್ಟನ್: ಜಿ-20 ಶೃಂಗಸಭೆ ಆರಂಭ
ಅಫ್ಘಾನ್‌ಗೆ 2ಸಾವಿರ ಸೈನಿಕರ ರವಾನೆ : ಬ್ರಿಟನ್
ಅಮೆರಿಕ: ವಿದೇಶಾಂಗ ಕಾರ್ಯದರ್ಶಿಯಾಗಿ ಹಿಲರಿ ?
ಪಾಕ್ : ಕೆನಡ ಪತ್ರಕರ್ತೆಯ ಅಪಹರಣ
ದಲೈಲಾಮಾ ಭಾರತ ಭೇಟಿ ತಡೆಗೆ ಚೀನಾ ಆಗ್ರಹ