ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪರಮಾಣು ಒಪ್ಪಂದ: ಭಾರತ-ಕೆನಡ ಸಂಧಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರಮಾಣು ಒಪ್ಪಂದ: ಭಾರತ-ಕೆನಡ ಸಂಧಾನ
ನಾಗರಿಕ ಪರಮಾಣು ಘಟಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡ ಸಂಧಾನ ಮಾಡಿಕೊಂಡ ಪರಿಣಾಮ ನಾಗರಿಕ ಅಣ್ವಸ್ತ್ರ ಸ್ಥಾವರಗಳು ಅಭಿವೃದ್ಧಿಗೊಳ್ಳಲಿದಯೆಂದು ವಿದೇಶಾಂಗ ಕಚೇರಿಯ ಮೂಲಗಳು ತಿಳಿಸಿವೆ.

ಈ ಕುರಿತು ಎರಡು ದೇಶಗಳು ಕಳೆದ ತಿಂಗಳಿನಲ್ಲಿ ಅನೌಪಚಾರಿಕವಾದ ಮೂತುಕತೆಯನ್ನು ನಡೆಸಿದ್ದು, ಔಪಚಾರಿಕವಾದ ಭೇಟಿಗಾಗಿ ಉಭಯ ರಾಷ್ಟ್ರಗಳು ಬಹುಬೇಗನೆ ವೇಳಾಪಟ್ಟಿಯನ್ನು ನಿಗದಿಪಡಿಸಲಿದೆ ಎಂದು ಲಿಸಾ ಮೊನೆಟೆ ತಿಳಿಸಿದರು. ಭಾರತದ ಗಡಿ ಪ್ರದೇಶದಲ್ಲಿನ ಸಮುದಾಯದ ಅಣ್ವಸ್ತ್ರಚಾಲಿತವಾದ ಪರಮಾಣು ಶಕ್ತಿಯ ಮರು ನಿರ್ಮಾಣಕ್ಕೆ ಕೆನಡವು ಪೂರ್ಣ ಬೆಂಬಲವನ್ನು ನೀಡಲಿದೆಯೆಂದು ಅವರು ಭರವಸೆ ನೀಡಿದರು.

ಭಾರತವು ಜವಾಬ್ದಾರಿಯುತವಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ತನ್ನ ಮಹತ್ವದ ಮ‌ೂಲಭೂತ ಹಕ್ಕುಗಳಾದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ಕೆನಡಾದೊಂದಿಗೆ ಹಂಚಿಕೊಂಡು ನ್ಯಾಯಪರಿಪಾಲನೆಯನ್ನು ಗೌರವಿಸಲಿದೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಇತರ ಅನೇಕ ವಿಷಯಗಳಲ್ಲಿ ಕೆನಡ ಮತ್ತು ಭಾರತ ಬಹು ದೀರ್ಘಕಾಲದಿಂದ ಸೌಹಾರ್ದತೆಯಿಂದ ಇದ್ದು, ಇದೀಗ ಮತ್ತಷ್ಟು ಸೌಹಾರ್ದತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳು ಹೊಂದಾಣಿಕೆಯಿಂದ ಕೆಲಸವನ್ನು ಮುಂದುವರಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೈಂಗಿಕ ಕಿರುಕುಳ: ಡಿಸೈನರ್ ಆನಂದ್ ದೋಷಿ
ಅಮೆರಿಕ: ಭಾರತೀಯನಿಂದ 33ಮಿ.ಡಾಲರ್ ವಂಚನೆ
ವಾಷಿಂಗ್ಟನ್: ಜಿ-20 ಶೃಂಗಸಭೆ ಆರಂಭ
ಅಫ್ಘಾನ್‌ಗೆ 2ಸಾವಿರ ಸೈನಿಕರ ರವಾನೆ : ಬ್ರಿಟನ್
ಅಮೆರಿಕ: ವಿದೇಶಾಂಗ ಕಾರ್ಯದರ್ಶಿಯಾಗಿ ಹಿಲರಿ ?
ಪಾಕ್ : ಕೆನಡ ಪತ್ರಕರ್ತೆಯ ಅಪಹರಣ