ಟಿಬೆಟ್ ಬಿಕ್ಕಟ್ಟಿನ ಬಗ್ಗೆ ಧಾರ್ಮಿಕ ಗುರು ದಲೈಲಾಮಾ ಬೆಂಬಲಿತ ರಾಯಭಾರಿಗಳೊಂದಿಗೆ ತಿಂಗಳಾರಂಭದಲ್ಲಿ ನಡೆಸಿದ ಮಾತುಕತೆಯು ವಿಫಲಗೊಂಡಿದ್ದು, ಮಾತುಕತೆಯನ್ನು ಮುಂದುವರಿಸಲು ಚೀನಾವು ತಯಾರಿದೆಯೆಂದು ಶುಕ್ರವಾರ ಚೀನಾದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಲೈಲಾಮಾರೊಂದಿಗಿನ ಮಾತುಕತೆಯು ಯಶಸ್ವಿಯಾಗಲು ಚೀನಾವು ಪರಿಪೂರ್ಣವಾದ ಶ್ರಮವಹಿಸಿದ್ದು, ಆದರೆ ಮಾತುಕತೆಯು ವಿಫಲ ಗೊಂಡಿದ್ದು, ಇನ್ನೂ ಮುಂದೆಯೂ ಚರ್ಚೆಯನ್ನು ಮುಂದುವರಿಸಲು ಚೀನಾವು ದಲೈಲಾಮಾರನ್ನು ಸ್ವಾಗತಿಸುವುದಾಗಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಜೂ ವಿಕಾನ್ ಹೇಳಿದರು.
ಟಿಬೆಟ್ ಜನರ ಭವಿಷ್ಯದ ಬಗ್ಗೆ ಭಾರತದೊಂದಿಗೆ ಚರ್ಚಿಸಲು ದಲೈಲಾಮಾ ಧರ್ಮಶಾಲಾ ತಲುಪಲಿದ್ದು, ಐದು ದಿನದ ಮಾತುಕತೆಯು ಸೋಮವಾರದಿಂದ ಆರಂಭವಾಗಲಿದೆ. ಇದರೆಡೆ ಚೀನಾವು ದಲೈಲಾಮಾರೊಂದಿಗೆ ಚರ್ಚೆಯ ಮುಂದುವರಿಕೆಗೆ ತಯಾರಿರುವುದಾಗಿ ಹೇಳಿದೆ.
ಟಿಬೆಟ್ ಚೀನಾದ ಅವಿಭಾಜ್ಯ ಗಡಿ ಪ್ರದೇಶವಾಗಿದೆಯೆಂದು ಚೀನಾ ಪಟ್ಟುಹಿಡಿದಿದ್ದು, 2002ರ ನಂತರ ಚೀನಾ ಅಧಿಕಾರಿಗಳು ಟಿಬೆಟ್ ರಾಯಭಾರಿಗಳೊಂದಿಗೆ ಬಿಕ್ಕಟ್ಟಿನ ಬಗ್ಗೆ ಹಲವು ಸುತ್ತಿನ ಮಾತುಕತೆಯನ್ನು ನಡೆಸಲಾಗಿತ್ತು. |