ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ಶರಣಾಗತಿಗೆ ಶ್ರೀಲಂಕಾ ಆಹ್ವಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ಶರಣಾಗತಿಗೆ ಶ್ರೀಲಂಕಾ ಆಹ್ವಾನ
ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಎಲ್‌ಟಿಟಿಇ ನೌಕಾ ನೆಲೆಯನ್ನು ಸೇನೆ ವಶಪಡಿಸಿಕೊಂಡ ಬೆನ್ನಲ್ಲೇ ಅಧ್ಯಕ್ಷ ಮಹೀಂದ್ರ ರಾಜಪಕ್ಸೆ ಅವರು ತಮಿಳು ಉಗ್ರರನ್ನು ಶರಣಾಗುವಂತೆ ಹಾಗೂ ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದಾರೆ.

ಬಾಂಬ್‌ಗಳ ದಾಳಿ ಮೂಲಕ ಮುನ್ನುಗ್ಗುತ್ತಿರುವ ಸೇನೆಯು ತಮಿಳು ಉಗ್ರರ ನೆಲೆಯೊಳಗೆ ಪ್ರವೇಶಿಸಿ ಹಿಮ್ಮೆಟ್ಟಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಜಾಫ್ನಾ ಭೂ ಮಾರ್ಗವನ್ನು ಶನಿವಾರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಎಲ್‌ಟಿಟಿಇ ವಶದಿಂದಾಗಿ ಈ ಮಾರ್ಗ ಎರಡು ದಶಕಗಳ ಕಾಲ ಮುಚ್ಚಲ್ಪಟ್ಟಿತ್ತು. ಈ ಸೇನೆಯ ಗೆಲುವಿನಿಂದ ಉತ್ತೇಜಿತರಾಗಿರುವ ರಾಜಪಕ್ಸೆ ಅವರು ಸೇನೆಯ ಮೂರು ಪಡೆಗಳನ್ನು ಹಾಗೂ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ ಜನತೆಯನ್ನು ಪ್ರಶಂಸಿಸಿದ್ದಾರೆ.

ಅಲ್ಲದೇ ಪಶ್ಚಿಮ ತೀರದ ನಗರದ ಪೂನೆರಿನ್ ಉತ್ತರ ಭಾಗವನ್ನು ವಶಪಡಿಸಿಕೊಳ್ಳುವ ಮೂಲಕ ಎಲ್‌ಟಿಟಿಇ ಪ್ರಮುಖ ಜಾಫ್ನಾ ಭೂ ಮಾರ್ಗ ಸಂಪರ್ಕವನ್ನು ಸೇನೆಯು ವಶಪಡಿಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಿ-20: ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಬಾನ್ ಕರೆ
ರಷ್ಯಾ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆ
ದಲೈಲಾಮಾ ಜತೆ ಮಾತುಕತೆಗೆ ಚೀನಾ ಸಿದ್ಧ
ಪರಮಾಣು ಒಪ್ಪಂದ: ಭಾರತ-ಕೆನಡ ಸಂಧಾನ
ಲೈಂಗಿಕ ಕಿರುಕುಳ: ಡಿಸೈನರ್ ಆನಂದ್ ದೋಷಿ
ಅಮೆರಿಕ: ಭಾರತೀಯನಿಂದ 33ಮಿ.ಡಾಲರ್ ವಂಚನೆ