ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೋಮಾಲಿ ಕಡಲ್ಗಳ್ಳರಿಂದ ಅಪಹೃತ ಹಡಗು ಬಂಧಮುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಮಾಲಿ ಕಡಲ್ಗಳ್ಳರಿಂದ ಅಪಹೃತ ಹಡಗು ಬಂಧಮುಕ್ತ
ಕಳೆದ ಎರಡು ತಿಂಗಳ ಹಿಂದೆ ಸೋಮಾಲಿ ಕಡಲ್ಗಳ್ಳರು ಅಪಹರಿಸಿದ್ದ ಜಪಾನ್‌ನ ಎಂವಿ ಸ್ಟೋಲ್ಟ್ ವಾಲೋರ್ ಹಡಗನ್ನು ಭಾನುವಾರ ಬೆಳಿಗ್ಗೆ ಬಂಧಮುಕ್ತಗೊಳಿಸಿದ್ದು, ಹಡಗಿನಲ್ಲಿದ್ದ 18 ಭಾರತೀಯರು ಸುರಕ್ಷಿತರಾಗಿರುವುದಾಗಿ ಕಿಶೋರೆ ರಾಜ್‌ವಂಶಿ ತಿಳಿಸಿದ್ದಾರೆ.

ಸ್ಟೋಲ್ಟ್ ವಾಲೋರ್ ಹಡಗಿನಲ್ಲಿ 18ಮಂದಿ ಭಾರತೀಯರು , ಇಬ್ಬರು ಫಿಲಿಫೈನ್ಸ್, ಓರ್ವ ಬಾಂಗ್ಲಾದೇಶಿ, ಓರ್ವ ರಷ್ಯನ್ ಸೇರಿದಂತೆ ಒಟ್ಟು 22ಮಂದಿ ಸಿಬ್ಬಂದಿಗಳು ಇದ್ದಿದ್ದರು. ಅವರೆಲ್ಲ ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಸೆಪ್ಟೆಂಬರ್ 15ರಂದು ಸೋಮಾಲಿ ಕಡಲ್ಗಳ್ಳರು ಸ್ಟೋಲ್ಟ್ ವಾಲೋರ್ ಹಡಗನ್ನು ಅಪಹರಿಸಿದ್ದರು, ಇದೀಗ ಎರಡು ತಿಂಗಳ ದೀರ್ಘ ಅವಧಿಯ ಬಳಿಕ ಹಡಗನ್ನು ಬಿಡುಗಡೆಗೊಳಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಹಡಗಿನಲ್ಲಿದ್ದವರು ಎಲ್ಲರೂ ಸುರಕ್ಷಿತವಾಗಿರುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದರು. ಆದರೆ ಒತ್ತೆಯಾಳಾಗಿದ್ದವರಿಗೆ ಔಷಧದ ಕೊರತೆ ಏನಾದರು ಇದೆಯೇ ಎಂಬ ಬಗ್ಗೆ ವಿವರ ತಿಳಿದು ಬಂದಿಲ್ಲ ಎಂದು ನ್ಯಾಷನಲ್ ಯೂನಿಯನ್ ಆಫ್ ಸೀಫಾರೆರ್ಸ್ ಇಂಡಿಯಾದ ಅಧ್ಯಕ್ಷ ಅಬ್ದುಲ್ ಗಣಿ ಸಿಎನ್‌ಎನ್-ಐಬಿಎನ್ ಜೊತೆ ಮಾತನಾಡುತ್ತ ಹೇಳಿದ್ದಾರೆ.

ಅಪಹೃತರ ಬಿಡುಗಡೆಗಾಗಿ ಶ್ರಮಿಸಿದ ಮಾಧ್ಯಮಗಳ ಹಾಗೂ ಸರ್ಕಾರದ ಸಹಾಯವನ್ನು ಶ್ಲಾಘಿಸುವುದಾಗಿ ಗನಿ ಈ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಟಿಟಿಇ ಶರಣಾಗತಿಗೆ ಶ್ರೀಲಂಕಾ ಆಹ್ವಾನ
ಜಿ-20: ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಬಾನ್ ಕರೆ
ರಷ್ಯಾ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆ
ದಲೈಲಾಮಾ ಜತೆ ಮಾತುಕತೆಗೆ ಚೀನಾ ಸಿದ್ಧ
ಪರಮಾಣು ಒಪ್ಪಂದ: ಭಾರತ-ಕೆನಡ ಸಂಧಾನ
ಲೈಂಗಿಕ ಕಿರುಕುಳ: ಡಿಸೈನರ್ ಆನಂದ್ ದೋಷಿ