ಉತ್ತರ ಕ್ಯಾಲಿಫೋರ್ನಿಯದಲ್ಲಿ ವಜಾಗೊಂಡ ನೌಕರನೊಬ್ಬ ಸೆಮಿಕಂಡಕ್ಟರ್ ಕಂಪೆನಿಯ ಭಾರತೀಯ ಮೂಲದ ಅಮೆರಿಕನ್ ಸಿಇಒ ಮತ್ತು ಇನ್ನಿಬ್ಬರನ್ನು ಗುಂಡಿಟ್ಟು ಸಾಯಿಸಿದ ಘಟನೆ ನಡೆದಿದೆ.
ಸಾಂಟಾ ಕ್ಲಾರಾದಲ್ಲಿರುವ ಈ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಮಾಜಿ ನೌಕರ ಅನೇಕ ಸುತ್ತು ಗುಂಡು ಹಾರಿಸಿದಾಗ ಸೈಪೋರ್ಟ್ ಇಂಕ್ ಮುಖ್ಯ ಕಾರ್ಯನಿರ್ವಾಹಕ ಸಿಡ್ ಅಗರವಾಲ್, ಕಂಪೆನಿಯ ಉಪಾಧ್ಯಕ್ಷ ಬ್ರಿಯನ್ ಪಗ್ ಮತ್ತು ಅಪರಿಚಿತ ಮಹಿಳೆ ಹತ್ಯೆಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಶೂಟಿಂಗ್‌ಗೆ ಸಂಬಂಧಿಸಿದಂತೆ ತನಿಖೆದಾರರು 47 ವರ್ಷ ವಯಸ್ಸಿನ ಜಿಂಗ್ ಹುವಾ ವು ಅವರಿಗಾಗಿ ಹುಡುಕಾಡುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕುವರ್ಷಗಳಷ್ಟು ಹಳೆಯದಾದ ಸಂಸ್ಥೆಗೆ ಜಿಂಗ್ ಲೆಡ್ ಪ್ರಾಡಕ್ಟ್ ಟೆಸ್ಟ್ ಎಂಜಿನಿಯರ್ ಕೆಲಸ ಮಾಡುತ್ತಿದ್ದು, ಕಂಪೆನಿಯಿಂದ ಇತ್ತೀಚೆಗೆ ವಜಾ ಮಾಡಲಾಗಿತ್ತು. ಗುಂಡಿನ ದಾಳಿಗೆ ಅದು ಸಂಭವನೀಯ ಪ್ರೇರಣೆಯಿರಬಹುದೇ ಎಂದು ತನಿಖೆದಾರರು ಶೋಧಿಸುತ್ತಿದ್ದಾರೆ.
ಅಗರವಾಲ್ ಅವರು ಸುಮಾರು 25 ವರ್ಷಗಳ ಅನುಭವ ಹೊಂದಿದ್ದು, ಅಡೋಬ್, ಇಂಟೆಲ್ ಮತ್ತು ಬೆಲ್ ಲ್ಯಾಬ್ಸ್ ಸೇರಿದಂತೆ ಉನ್ನತ ತಂತ್ರಜ್ಞಾನದ ಕಂಪೆನಿಗಳನ್ನು ಸ್ಥಾಪಿಸಿದ್ದರು.
ಅಗರವಾಲ್ ಅವರು ಐಐಟಿ ಕಾನ್ಪುರದಲ್ಲಿ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ದಕ್ಷಿಣ ಇಲ್ಲಿನೋಯ್ಸ್‌ನಲ್ಲಿ ಎಂಎಸ್ ಪದವಿ ಗಳಿಸಿದ್ದರು. ಚಿಕಾಗೋ ಯೂನಿರ್ವಸಿಟಿ ಯಲ್ಲಿ ಎಂಬಿಎ ಪದವಿ ಪಡೆದಿದ್ದರು. |