ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಡಲ್ಗಳ್ಳರಿಂದ ಮತ್ತೊಂದು ಹಡಗು ಅಪಹರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಡಲ್ಗಳ್ಳರಿಂದ ಮತ್ತೊಂದು ಹಡಗು ಅಪಹರಣ
ಜಪಾನ್‌ನ ಕಾರ್ಗೋ ಹಡಗೊಂದನ್ನು ಮತ್ತೆ ಸೋಮಾಲಿಯ ಕಡಲ್ಗಳ್ಳರು ಶನಿವಾರ ತಡರಾತ್ರಿ ವಶಪಡಿಸಿಕೊಂಡಿರುವುದಾಗಿ ಸಿಯೋಲ್ ವಿದೇಶಾಂಗ ಸಚಿವಾಲಯ ತಿಳಿಸಿರುವುದಾಗಿ ದಕ್ಷಿಣ ಕೊರಿಯಾದ ಯೊನ್‌ಹಾಪ್ ಸುದ್ದಿ ಸಂಸ್ಥೆ ವರದಿ ಹೇಳಿದೆ.

ಕಳೆದ ಎರಡು ತಿಂಗಳ ಹಿಂದೆ ಅಪಹರಿಸಿದ್ದ ಸ್ಟಾಲ್ಟ್ ವಾಲೋರ್ ಹಡಗನ್ನು ಭಾನುವಾರ ಬೆಳಿಗ್ಗೆ ಬಂಧಮುಕ್ತಗೊಳಿಸಿದ್ದು, ಹಡಗಿನಲ್ಲಿದ್ದ 18 ಭಾರತೀಯರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸಿದ್ದರು.

ಇದೀಗ ಸ್ಟಾಲ್ಟ್ ವಾಲೋರ್ ಹಡಗನ್ನು ಬಿಡುಗಡೆಗೊಳಿಸುವ ಮುನ್ನ ಜಪಾನ್‌ನ ಮತ್ತೊಂದು ಹಡಗನ್ನು ಕಡಲ್ಗಳ್ಳರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಈ ಹಡಗಿನಲ್ಲಿ 5ಮಂದಿ ದಕ್ಷಿಣ ಕೊರಿಯನ್‌ರು ಸೇರಿದಂತೆ 23ಮಂದಿ ಸಿಬ್ಬಂದಿಗಳಿದ್ದಾರೆ ಎಂದು ವರದಿ ತಿಳಿಸಿದೆ.

ಹಡಗನ್ನು ಅಪಹರಿಸಿರುವ ಕಡಲ್ಗಳ್ಳರಿಂದ ಸಿಬ್ಬಂದಿಗಳಿಗೆ ಯಾವುದೇ ತೆರನಾದ ಅಪಾಯಗಳು ಉಂಟಾಗಿದೆಯೇ, ಸುರಕ್ಷಿತವಾಗಿದ್ದಾರೆಯೇ ಎಂಬ ಕುರಿತು ಯಾವುದೇ ವರದಿ ತಿಳಿದು ಬಂದಿಲ್ಲ ಎಂದು ವರದಿ ವಿವರಿಸಿದೆ.

ಭಾರೀ ಶಸ್ತ್ರಾಸ್ತ್ರದೊಂದಿಗೆ ದಾಳಿ ನಡೆಸುತ್ತಿರುವ ಸೋಮಾಲಿ ಕಡಲ್ಗಳ್ಳರು ಪ್ರಸಕ್ತ ಸಾಲಿನಲ್ಲಿ 30ಅಧಿಕ ಹಡಗುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಇದೀಗ ಗಲ್ಫ್ ರಾಷ್ಟ್ರಗಳಿಗೆ ಪ್ರಮುಖ ಹಡಗು ಮಾರ್ಗವಾಗಿರುವ ಸೋಮಾಲಿ ಕರಾವಳಿ ಪ್ರದೇಶ ಪ್ರಪಂಚದ ಭಾರೀ ಅಪಾಯಕಾರಿ ಸ್ಥಳವಾಗಿರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ: ವಜಾಗೊಂಡ ನೌಕರನಿಂದ ಭಾರತೀಯನ ಹತ್ಯೆ
ಸೋಮಾಲಿ ಕಡಲ್ಗಳ್ಳರಿಂದ ಅಪಹೃತ ಹಡಗು ಬಂಧಮುಕ್ತ
ಎಲ್‌ಟಿಟಿಇ ಶರಣಾಗತಿಗೆ ಶ್ರೀಲಂಕಾ ಆಹ್ವಾನ
ಜಿ-20: ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಬಾನ್ ಕರೆ
ರಷ್ಯಾ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆ
ದಲೈಲಾಮಾ ಜತೆ ಮಾತುಕತೆಗೆ ಚೀನಾ ಸಿದ್ಧ