ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಸ್ಥಳೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿರುವುದಾಗಿ ಹೇಳಿದೆ.
ಅಲ್ಲದೇ ಭಾರೀ ಭೂಕಂಪನದ ಬೆನ್ನಲ್ಲೇ, ತ್ಸುನಾಮಿ ಮುನ್ನೆಚ್ಚರಿಕೆಯನ್ನೂ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪ ಸಂಭವಿಸಿದ ಪ್ರದೇಶದವಾದ ಸುಲಾವೆಸಿ ದ್ವೀಪಪ್ರದೇಶದತ್ತ ಭಾರೀ ಪ್ರಮಾಣದಲ್ಲಿ ಒಳಹರಿವುವಿನ ನೀರು ಹರಿದು ಬರುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪನದಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು. ಸೆಂಟ್ರಲ್ ಸುಲಾವೆಸಿಯ ಬೌಲ್ ಪ್ರದೇಶದಲ್ಲಿ ನೂರು ಮನೆಗಳು ಭಾಗಶಃ ಹಾನಿಗೊಂಡಿದ್ದರೆ, 20ಮನೆಗಳು ಸಂಪೂರ್ಣ ಧ್ವಂಸಗೊಂಡಿರುವುದಾಗಿ ಮೆಟ್ರೋ ಟಿವಿ ವರದಿ ತಿಳಿಸಿದೆ.
ಸುಲಾವೆಸಿ ಕರಾವಳಿ ಸಮುದ್ರ ತೀರದಲ್ಲಿ ಸಂಭವಿಸಿರುವ ಈ ಭೂಕಂಪ ತ್ಸುನಾಮಿಯ ಮುನ್ನೆಚ್ಚರಿಕೆಯಾಗಿದೆ ಎಂದು ಅಮೆರಿಕ ಹವಾಮಾನ ಇಲಾಖೆ ವಿವರಿಸಿದೆ.
ಇಂಡೋನೇಷ್ಯಾದಲ್ಲಿ ಈಗಾಗಲೇ ಹಲವಾರು ಭಾರೀ ಭೂಕಂಪ ಸಂಭವಿಸಿತ್ತು. ಭಾನುವಾರ ಸಂಭವಿಸಿದ ಭೂಕಂಪನದಲ್ಲಿ ಸಾವು-ನೋವಿನ ಪೂರ್ಣ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ. |