ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕ್ಯಾಸ್ಟ್ರೋ ಮರಳಿ ಅಧಿಕಾರದ ಗದ್ದುಗೆಗೆ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯಾಸ್ಟ್ರೋ ಮರಳಿ ಅಧಿಕಾರದ ಗದ್ದುಗೆಗೆ ?
PTI
ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ಆರೋಗ್ಯ ಉತ್ತಮವಾಗಿದ್ದು, ಅವರು ಆಸಕ್ತಿ ಹೊಂದಿದ್ದರೆ ಮರಳಿ ಅಧಿಕಾರ ಗದ್ದುಗೆ ಏರಬಹುದಾಗಿದೆ ಎಂದು ಕ್ಯಾಸ್ಟ್ರೋ ಅವರ ಖಾಸಗಿ ಸ್ಪ್ಯಾನಿಷ್ ವೈದ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರಳು ಬೇನೆಯಿಂದ ನರಳುತ್ತಿದ್ದ ಕ್ಯಾಸ್ಟ್ರೋ ಅವರ ಸ್ಥಿತಿ 2006ರಲ್ಲಿ ತುಂಬಾ ಹದಗೆಟ್ಟಿತ್ತು. ಇಂದು ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಅವರಿಗೆ ಮರಳಿ ಅಧ್ಯಕ್ಷಪಟ್ಟಕ್ಕೆ ಏರುವ ಹಂಬಲ ಇದ್ದರೆ ಯಾವುದೇ ಸಮಸ್ಯೆ ಇಲ್ಲ.

ಆ ನಿಟ್ಟಿನಲ್ಲಿ ಅವರು ದೈಹಿಕವಾಗಿ,ಮಾನಸಿಕವಾಗಿಯೂ ಅವರು ಆರೋಗ್ಯವಂತರಾಗಿದ್ದಾರೆ ಎಂದು ವೈದ್ಯ ಜೊಸೆ ಲೂಯಿಸ್ ಗಾರ್ಸಿಯಾ ಸಾರ್ಬಿಡೋ ಅವರ ಸಂದರ್ಶನದ ಭಾಗವನ್ನು ಭಾನುವಾರ ಅರ್ಜೈಂಟೀನಾ ಪ್ರೆಸ್‌ನ ಇಎಫ್‌ಇ ಸುದ್ದಿ ಸಂಸ್ಥೆಯೊಂದರ ವರದಿ ಬಹಿರಂಗಪಡಿಸಿದೆ.

ಆದರೆ ಫಿಡೆಲ್ ಕ್ಯಾಸ್ಟ್ರೋ ಅವರು ಬಲವಂತದಿಂದ ಅಧಿಕಾರದಿಂದ ಕೆಳಗಿಳಿದಿದ್ದಾರೆ ಎಂಬುದನ್ನು ತಾನು ನಂಬುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವೈದ್ಯರು, ತೀವ್ರವಾಗಿ ಆರೋಗ್ಯ ಹದಗೆಟ್ಟಿದ್ದರಿಂದ ಅಧಿಕಾರವನ್ನು ಹಸ್ತಾರಿಸಿರುವುದಾಗಿ ಹೇಳಿದರು.

ಫಿಡೆಲ್ ಅವರು ಮತ್ತೆ ಅಧಿಕಾರದ ಗದ್ದುಗೆಯನ್ನು ಏರಲಾರರು ಎಂಬ ನಂಬುಗೆ ಇದ್ದು, ಈಗಾಗಲೇ ಅವರು ಆಡಳಿತದ ಚುಕ್ಕಾಣಿಯನ್ನು ಎರಡನೇ ಹಂತದ ಅಧಿಕಾರಿಗಳಿಗೆ ವಹಿಸಿದ್ದು,ಕ್ಯಾಸ್ಟ್ರೋ ಮಾರ್ಗದರ್ಶನದಲ್ಲೇ ಮುಂದುವರಿಯಲಿದೆ ಎಂದು ಸಾರ್ಬಿಡೋ ತಿಳಿಸಿದರು.

ಕ್ರಾಂತಿಕಾರಿ ನಾಯಕ 82ರ ಹರೆಯದ ಕ್ಯಾಸ್ಟ್ರೋ ಅವರು 2006ರ ಜುಲೈ ಬಳಿಕ ಯಾವುದೇ ಸಾರ್ವಜನಿಕ ಸಭೆ,ಸಮಾರಂಭಗಳಲ್ಲಿ ಭಾಗವಹಿಸಿಲ್ಲ. ಸಹೋದರ ರೌಲ್ ಕ್ಯಾಸ್ಟ್ರೋಗೆ ಅಧಿಕಾರವನ್ನು ಹಸ್ತಾಂತರಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಕಡಲ್ಗಳ್ಳರಿಂದ ಮತ್ತೊಂದು ಹಡಗು ಅಪಹರಣ
ಅಮೆರಿಕ: ವಜಾಗೊಂಡ ನೌಕರನಿಂದ ಭಾರತೀಯನ ಹತ್ಯೆ
ಸೋಮಾಲಿ ಕಡಲ್ಗಳ್ಳರಿಂದ ಅಪಹೃತ ಹಡಗು ಬಂಧಮುಕ್ತ
ಎಲ್‌ಟಿಟಿಇ ಶರಣಾಗತಿಗೆ ಶ್ರೀಲಂಕಾ ಆಹ್ವಾನ
ಜಿ-20: ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಬಾನ್ ಕರೆ