ಬಾಸ್ಕೋ ಪ್ರತೇಕಾವಾದಿ ಬಂಡುಕೋರ ಸಂಘಟನೆ(ಇಟಿಎ)ಯ ಶಂಕಿತ ಮುಖಂಡನನ್ನು ನೈರುತ್ಯ ಫ್ರಾನ್ಸ್ ಪ್ರದೇಶದಲ್ಲಿ ಬಂಧಿಸಲಾಗಿದೆಯೆಂದು ಫ್ರೆಂಚ್ ಆಂತರಿಕ ಸಚಿವಾಲಯವು ಸೋಮವಾರ ತಿಳಿಸಿದೆ. ಝೆರೊಕಿ ಮತ್ತು ಚೆರೊಕೀ ಎಂಬ ಉಪನಾಮಗಳಿಂದ ಕರೆಯಲ್ಪಡುವ ಗ್ಯಾರಿಕೈಟ್ ಆಸ್ಪಿಜ್ ರೂಬಿನಾ ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಸ್ಪೆನ್ ಗಡಿಯಾಚೆಗಿನ ಫ್ರಾನ್ಸ್‌ನ ಪಿರೆನಿಯನ್‌ನ ಪರ್ವತ ಪ್ರದೇಶದಲ್ಲಿ ಈತನನ್ನು ಬಂಧಿಸಲಾಗಿದೆಯೆಂದು ಆಂತರಿಕ ಸಚಿವಾಲಯವು ವರದಿ ಮಾಡಿವೆ.
ಸ್ಪಾನಿಶ್ ನಾಗರಿಕರ ಇಬ್ಬರು ರಕ್ಷಣಾ ಪೊಲೀಸರನ್ನು 2007ರಲ್ಲಿ ಆಸ್ಪಿಜು ಹತ್ಯೆಗೈಯಲಾಗಿತ್ತು ಎಂಬ ಸಂಶಯದ ಮೇರೆಗೆ ಬಂಧಿಸಲಾಗಿದೆಯೆಂದು ಸಚಿವಾಲಯವು ತಿಳಿಸಿದೆ. 2006ರಲ್ಲಿ ಎರಡು ಮಂದಿಯ ಸಾವಿಗೆ ಕಾರಣವಾದ ಮಾಡ್ರಿಡ್ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಆಸ್ಪಿಜು ಭಾಗಿಧಾರಿಯಾಗಿದ್ದಾರೆಂದು ಸ್ಪಾನಿಶ್ ಸರ್ಕಾರ ಪುರಾವೆ ಸಹಿತ ಆರೋಪ ಮಾಡಲಾಗಿತ್ತು.
ಈ ಬಂಧನದಿಂದ ಭಯೋತ್ಪಾದನೆ ವಿರುದ್ಧ ಫ್ರೆಂಚ್ ಪೊಲೀಸರ ದೃಢವಾದ ಸಂಕಲ್ಪದೊಂದಿಗೆ ಬದ್ಧತೆಯನ್ನು ತೋರಿಸುತ್ತದೆಯಲ್ಲದೆ ಬಾಸ್ಕೋ ಉಗ್ರಗಾಮಿ ಸಂಘಟನೆಯ ವಿರುದ್ಧ ಹೋರಾಡಲು ಫ್ರೆಂಚ್ ಮತ್ತು ಸ್ಪಾನಿಚ್ ಸರಕಾರಗಳು ಒಗ್ಗಟ್ಟಿನಿಂದ ಕಾರ್ಯಪ್ರವೃತವಾಗಿವೆ. |