ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತೈವಾನ್ ಮಾಜಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈವಾನ್ ಮಾಜಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು
ತೈವಾನ್‌ನ ಬಂಧಿತ ಮಾಜಿ ಅಧ್ಯಕ್ಷ ಚೆನ್ ಸೂಯಿ-ಬಿಯನ್‌ರವರ ಆರೋಗ್ಯ ಸ್ಥಿತಿ ಹದೆಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಐದು ದಿನಗಳಿಂದ ಅವರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಹೃದಯ ಬಡಿತದ ಏರುಪೇರಿನಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಅಧ್ಯಕ್ಷ ಚೆನ್‌ರನ್ನು ಕಳೆದ ಬುಧವಾರ ಬಂಧಿಸಲಾಗಿತ್ತು. ಸೆರೆಯಲ್ಲಿದ್ದ ಚೆನ್ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಇದು ಅವರ ಆರೋಗ್ಯ ಸ್ಥಿತಿ ಹದೆಗೆಡಲು ಕಾರಣವಾಗಿತ್ತು. ವೈದ್ಯ ಆರೋಗ್ಯ ತಪಾಸಣೆಯ ನಂತರ ಅವರನ್ನು ಆಸ್ಪತ್ರೆಗೆ ದಾಖಲಾಯಿಸಲಾಯಿತು ಎಂದು ಜೈಲಿನ ಅಧಿಕಾರಿ ಲಿ ತಾ-ಚೂ ಮಾಧ್ಯಮಕ್ಕೆ ವಿವರ ನೀಡಿದ್ದಾರೆ.

ಚೆನ್ ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿದ್ದು ಹೃದಯದ ಎಡಭಾಗದಲ್ಲಿ ನೋವು ಉಂಟಾಗಿದೆಯೆಂದು ಅವರು ಹೇಳಿದರು.

ಚೆನ್ ಸೆರೆಯ ನಂತರ ಅವರ ಬೆಂಬಲಿಗರು ನಿರಪರಾಧಿಯಾದ ಅವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಔಪಚಾರಿಕವಾಗಿ ಅವರ ಮೇಲೆ ದೋಷರೋಪಣೆ ಪಟ್ಟಿ ಸಲ್ಲಿಕೆಯಾಗಲಿಲ್ಲ, ಆದರೆ ತೈವಾನ್ ಕಾನೂನು ಪ್ರಕಾರ ಅಧಿಕಾರಿಗಳಿಂದ ಪ್ರಕರಣವನ್ನು ಮುಂದುವರಿಸುವಾಗ ನಾಲ್ಕು ತಿಂಗಳವರೆಗೆ ಸೆರೆಯಲ್ಲಿಡುವ ಅಧಿಕಾರವಿದೆ.

ಮೇ ತಿಂಗಳಲ್ಲಿ ಚೆನ್ ಅವರ ಎಂಟು ವರ್ಷಗಳ ಕಾಲದ ದೀರ್ಘ ಆಡಳಿತಾವಧಿಯು ಕೊನೆಗೊಂಡ ತಕ್ಷಣವೇ ಭ್ರಷ್ಟಾಚಾರದ ಆರೋಪವನ್ನು ಹೊರಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫ್ರಾನ್ಸ್ : ಶಂಕಿತ ಇಟಿಎ ಉಗ್ರನ ಬಂಧನ
ಕ್ಯಾಸ್ಟ್ರೋ ಮರಳಿ ಅಧಿಕಾರದ ಗದ್ದುಗೆಗೆ ?
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಕಡಲ್ಗಳ್ಳರಿಂದ ಮತ್ತೊಂದು ಹಡಗು ಅಪಹರಣ
ಅಮೆರಿಕ: ವಜಾಗೊಂಡ ನೌಕರನಿಂದ ಭಾರತೀಯನ ಹತ್ಯೆ
ಸೋಮಾಲಿ ಕಡಲ್ಗಳ್ಳರಿಂದ ಅಪಹೃತ ಹಡಗು ಬಂಧಮುಕ್ತ