ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತುರ್ತುಪರಿಸ್ಥಿತಿ ವಾಪಸ್‌ಗೆ ಅಂತಿಮ ಗಡುವು:ಜಿಯಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುರ್ತುಪರಿಸ್ಥಿತಿ ವಾಪಸ್‌ಗೆ ಅಂತಿಮ ಗಡುವು:ಜಿಯಾ
ದೇಶದ ಮೇಲೆ ಹೇರಿರುವ ತುರ್ತುಪರಿಸ್ಥಿತಿಯನ್ನು 48ಗಂಟೆಗಳ ಕಾಲಾವಧಿಯೊಳಗೆ ವಾಪಸ್ ಪಡೆಯುವಂತೆ ಬಾಂಗ್ಲಾ ಮಾಜಿ ಪ್ರಧಾನಿ ಖಲೀದಾ ಜಿಯಾ ಸೋಮವಾರ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದಾರೆ.

ಅಲ್ಲದೇ ಎಮರ್ಜೆನ್ಸಿಯನ್ನು ಹಿಂದಕ್ಕೆ ಪಡೆಯದಿದ್ದಲ್ಲಿ ತಮ್ಮ ಪಕ್ಷ ಡಿಸೆಂಬರ್ 18ರಂದು ನಡೆಯುವ ಸಾರ್ವತ್ರಿಕ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

ಆ ನಿಟ್ಟಿನಲ್ಲಿ ನಾವು ಸರ್ಕಾರದ ಮೇಲೆ ಭರವಸೆ ಹೊಂದಿದ್ದು, ಉತ್ತಮ ಬೆಳವಣಿಗೆಯ ನಿರೀಕ್ಷೆ ಇರುವುದಾಗಿ ತಿಳಿಸಿದ ಜಿಯಾ ಅವರು, ಸಾರ್ವತ್ರಿಕ ಚುನಾವಣೆಗಾಗಿ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗುವ ಆಶಾಭಾವ ವ್ಯಕ್ತಪಡಿಸಿದರು.

ಅದಿಲ್ಲದಿದ್ದರೆ ಇದೇ ಸ್ಥಿತಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಿದ್ದೇ ಆದಲ್ಲಿ, ಆಗ ಉದ್ಭವಿಸುವ ಪರಿಸ್ಥಿತಿಗೆ ಚುನಾವಣಾ ಆಯೋಗ ಹಾಗೂ ಸರ್ಕಾರವೇ ನೇರ ಹೊಣೆ ಎಂದು ಅವರು ಆರೋಪಿಸಿದರು.

ಚುನಾವಣೆಯಲ್ಲಿ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಜಿಯಾ, ನಮಗೆ ಬೇಕಾಗಿರುವುದು ಚುನಾವಣೆಯಲ್ಲಿನ ಸ್ಪರ್ಧೆ ಮಾತ್ರ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈವಾನ್ ಮಾಜಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು
ಫ್ರಾನ್ಸ್ : ಶಂಕಿತ ಇಟಿಎ ಉಗ್ರನ ಬಂಧನ
ಕ್ಯಾಸ್ಟ್ರೋ ಮರಳಿ ಅಧಿಕಾರದ ಗದ್ದುಗೆಗೆ ?
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಕಡಲ್ಗಳ್ಳರಿಂದ ಮತ್ತೊಂದು ಹಡಗು ಅಪಹರಣ
ಅಮೆರಿಕ: ವಜಾಗೊಂಡ ನೌಕರನಿಂದ ಭಾರತೀಯನ ಹತ್ಯೆ