ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತಾಲಿಬಾನ್‌ನಿಂದ ಫ್ರಾನ್ಸ್‌ ಮೇಲೆ ದಾಳಿ ಬೆದರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಲಿಬಾನ್‌ನಿಂದ ಫ್ರಾನ್ಸ್‌ ಮೇಲೆ ದಾಳಿ ಬೆದರಿಕೆ
ಆಫ್ಘಾನ್‌ನಲ್ಲಿ ನೆಲೆನಿಂತಿರುವ ಫ್ರೆಂಚ್ ಸೈನ್ಯವನ್ನು ಹಿಂತೆಗೆಯದಿದ್ದರೆ ಫ್ರಾನ್ಸ್ ಮೇಲೆ ಭಯೋತ್ಪಾದನಾ ದಾಳಿ ನಡೆಸಲಾಗುವುದು ಎಂದು ತಾಲಿಬಾನ್ ಬೆದರಿಕೆಯ ವೀಡಿಯೋ ಸಂದೇಶವನ್ನು ಸೋಮವಾರ ಅಲ್-ಅರೇಬಿಯಾ ದೂರದರ್ಶನ ಪ್ರಸಾರ ಮಾಡಿದೆ.

ಬೆದರಿಕೆಯ ವೀಡಿಯೋ ಸಂದೇಶವನ್ನು ದುಬೈ ಮೂಲದ ಖಾಸಗಿ ಚಾನೆಲ್‌ವೊಂದು ಪ್ರಸಾರ ಮಾಡಿದೆ. ಆಗಸ್ಟ್‌ನಲ್ಲಿ ಹತ್ತು ಮಂದಿ ಫ್ರೆಂಚ್ ಸೈನಿಕರ ಸಾವಿಗೆ ಕಾರಣವಾದ ಭಯೋತ್ಪಾದನಾ ದಾಳಿಯ ಹೊಣೆಗಾರಿಕೆಯನ್ನು ಈ ಸಂಘಟನೆಯು ಹೊತ್ತಿದೆ.

ತಾಲಿಬಾನ್ ಭಯೋತ್ಪಾದನಾ ಸಂಘಟನೆಯ ನೇತಾರ ಫಾರುಕ್ ಎಂದು ಪರಿಚಯಿಸಿಕೊಂಡಿರುವ ಈತ ವೀಡಿಯೋ ಸಂದೇಶದಲ್ಲಿ ಅರೆಬಿಕ್ ಭಾಷೆಯಲ್ಲಿ ಘೋಷಣೆ ಕೂಗುತ್ತಾ, ಆಫ್ಘಾನ್‌ನಲ್ಲಿದ್ದ ಫ್ರೆಂಚ್ ಸೈನಿಕರನ್ನು ವಾಪಸ್ ಕರೆಯಿಸಿಕೊಳ್ಳದಿದ್ದಲ್ಲಿ ಪ್ಯಾರಿಸ್ ಮುಂದಿನ ಪರಿಣಾಮ ಎದುರಿಸಬೇಕಾದಿತು ಎಂದು ಬೆದರಿಕೆ ಒಡ್ಡಿದೆ.

ದಕ್ಷಿಣ ಕಾಬೂಲ್‌ನಿಂದ 60ಕಿ.ಮೀ.ದೂರದಲ್ಲಿ ಆಗೋಸ್ಟ್ 18ರಂದು ನಡೆದ ದಾಳಿಯಲ್ಲಿ 10ಮಂದಿ ಫ್ರೆಂಚ್ ಸೈನಿಕರು ಸಾವನ್ನಪ್ಪಿದ್ದು, 21ಮಂದಿ ಗಾಯಗೊಂಡಿದ್ದರು, ಈ ದಾಳಿಯ ಹೊಣೆಯನ್ನು ತಾಲಿಬಾನ್ ಹೊತ್ತುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತುರ್ತುಪರಿಸ್ಥಿತಿ ವಾಪಸ್‌ಗೆ ಅಂತಿಮ ಗಡುವು:ಜಿಯಾ
ತೈವಾನ್ ಮಾಜಿ ಅಧ್ಯಕ್ಷ ಆಸ್ಪತ್ರೆಗೆ ದಾಖಲು
ಫ್ರಾನ್ಸ್ : ಶಂಕಿತ ಇಟಿಎ ಉಗ್ರನ ಬಂಧನ
ಕ್ಯಾಸ್ಟ್ರೋ ಮರಳಿ ಅಧಿಕಾರದ ಗದ್ದುಗೆಗೆ ?
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ
ಕಡಲ್ಗಳ್ಳರಿಂದ ಮತ್ತೊಂದು ಹಡಗು ಅಪಹರಣ