ಆಫ್ಘಾನಿಸ್ಥಾನಕ್ಕೆ ಸೇನೆಯನ್ನು ಕಳುಹಿಸುವ ಯಾವುದೇ ನಿರ್ಧಾರ ಹೊಂದಿಲ್ಲ ಎಂದು ಚೀನಾ ಮಂಗಳವಾರ ತಿಳಿಸಿದ್ದು, ಇದರೊಂದಿಗೆ ಅಂತಾರಾಷ್ಟ್ರೀಯ ರಕ್ಷಣಾ ಸಹಾಯಕ ಪಡೆಯೊಂದಿಗೆ ಕೈ ಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆಫ್ಘಾನಿಸ್ಥಾನಕ್ಕೆ ಚೀನಾವು ಸೈನ್ಯವನ್ನು ಕಳುಹಿಸಲು ಸಾಧ್ಯತೆ ಇದೆ ಎಂದು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಕಳೆದ ವಾರ ನ್ಯೂಯಾರ್ಕ್‌ನಲ್ಲಿ ಹೇಳಿಕೆಯನ್ನು ನೀಡಿದ್ದು, ಅದಕ್ಕೆ ಪೂರಕವಾಗಿ ಚೀನಾ ಈ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ.
ದೇಶದೊಳಗಗಿನ ಭದ್ರತೆ ಕಾಪಾಡಲು, ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಶಾಂತಿ ಪರಿಪಾಲನೆಯನ್ನು ಪುನ ಸ್ಥಾಪಿಸಲು ಆಘ್ಘಾನ್ ಸರಕಾರ ನಡೆಸುತ್ತಿರುವ ಪ್ರಯತ್ನವನ್ನು ಚೀನಾ ಸರಕಾರವು ಪೂರ್ಣವಾಗಿ ಬೆಂಬಲಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಕಿನ್ ಗಂಗ್‌ರ ಹೇಳಿಕೆಯನ್ನು ಸ್ಥಳೀಯ ಮಾಧ್ಯಮವು ವರದಿ ಮಾಡಿವೆ.
ಶಾಂತಿ ಪರಿಪಾಲನಾ ಕಾರ್ಯಾಚರಣೆಗೆ ವಿಶ್ವಸಂಸ್ಥೆಯ ರಕ್ಷಣಾ ಪಡೆಯ ಅನುಮತಿಯಿಲ್ಲದೆ ಚೀನಾವು ಯಾವತ್ತು ಸೈನ್ಯವನ್ನು ವಿದೇಶಗಳಿಗೆ ಕಳುಹಿಸಿ ಕೊಡಲಾಗುವುದಿಲ್ಲ, ಆದರೆ ಈ ಮೊದಲು ಐಎಸ್‌ಎಎಫ್‌ನೊಂದಿಗೆ ಭಾಗಿದಾರಿಯಾಗಿ ಚೀನಾವು ಆಘ್ಘಾನ್‌ಗೆ ಸೈನ್ಯವನ್ನು ಕಳುಹಿಸಲಾಗುವುದು ಎಂಬ ಮಾಧ್ಯಮದ ವರದಿಯನ್ನು ಅವರು ನಿರಾಕರಿಸಿದರು.
|