ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಕಳುಹಿಸಲ್ಪಡುವ ವಿದೇಶಿಯರಲ್ಲಿ ಬಹುದೊಡ್ಡ ಪಾಲು ಭಾರತದ್ದದಾಗಿದ್ದು, 2007-08 ಪ್ರಸಕ್ತ ಸಾಲಿನ ಅಮೆರಿಕ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಿದ ವಿದೇಶಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ.
ಅಮೆರಿಕ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಿಗೆ 2007-08ರಲ್ಲಿ ಭಾರತವು 94,563ರಷ್ಟು ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಕಳುಹಿಸಲಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಭಾರತವು ಕಳೆದ ಸಾಲಿಗಿಂತ 13 ಶೇಕಡಾ ಹೆಚ್ಚಿನ ವಿದ್ಯಾರ್ಥಿಗಳನ್ನು ವ್ಯಾಸಂಗಕ್ಕಾಗಿ ಕಳುಹಿಸಲಾಗಿದೆಯೆಂದು ಅಮೆರಿಕ ಸ್ಥಳೀಯ ವಿಭಾಗದ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ವಿದ್ಯಾಸಂಸ್ಥೆ(ಐಐಇ)ಯ ವರ್ಷಾವಧಿಯ ಒಪನ್ ಡೋರ್ ವರದಿಯು ಪ್ರಕಟಿಸಿದೆ.
ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಹತ್ತು ಜನಪ್ರಿಯ ಅಧ್ಯಯನ ಕಾರ್ಯಕ್ಷೇತ್ರಗಳಾದ ವ್ಯವಹಾರ ನಿರ್ವಹಣೆ(ಶೇ.20),ಇಂಜಿನಿಯರ್(ಶೇ.17), ಶಾರೀರಿಕ ಮತ್ತು ಜೀವ ಶಾಸ್ತ್ರ(ಶೇ.9), ಸಮಾಜ ಶಾಸ್ತ್ರ(ಶೇ.9), ಲೆಕ್ಕ ಮತ್ತು ಕಂಪ್ಯೂಟರ್ ಶಾಸ್ತ್ರ(ಶೇ.8) ಕ್ಷೇತ್ರಗಳು 2007-08ರ ಪ್ರಸಕ್ತ ಸಾಲಿನಲ್ಲಿ ಸೇರಿವೆ.
ಅಮೆರಿಕದ ವಿಶ್ವವಿದ್ಯಾನಿಲಯ ಹಾಗೂ ಕಾಲೇಜ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ದಾಖಲೆಯ ಏಳು ಶೇಕಡಷ್ಟು ಹೆಚ್ಚಳ ಉಂಟಾಗಿದ್ದು, ಒಟ್ಟು 2007-08 ಸಾಲಿನಲ್ಲಿ 623,805 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.
|