ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕ್ಯೂಬಾಕ್ಕೆ ಹು ಜಿಂಟಾವೋ ಐತಿಹಾಸಿಕ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯೂಬಾಕ್ಕೆ ಹು ಜಿಂಟಾವೋ ಐತಿಹಾಸಿಕ ಭೇಟಿ
ಚೀನಾ ಅಧ್ಯಕ್ಷ ಹು ಜಿಂಟಾವೋ ಅವರು ಮಂಗಳವಾರ ಕಮ್ಯೂನಿಷ್ಟ್ ಆಡಳಿತದ ಕ್ಯೂಬಾಕ್ಕೆ ಐತಿಹಾಸಿಕ ಭೇಟಿ ನೀಡುವ ಮೂಲಕ, ಕೋಟ್ಯಂತರ ರೂಪಾಯಿ ಧನಸಹಾಯ ನೀಡಿದ್ದಲ್ಲದೆ,ಭವಿಷ್ಯದಲ್ಲಿನ ವ್ಯಾಪಾರ ವಹಿವಾಟಿನ್ನು ಸೌಹಾರ್ದಯುತವಾಗಿ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಹರಿಕೇನ್ ಚಂಡಮಾರುತದಿಂದ ತತ್ತರಿಸಿಹೋಗಿರುವ ಕ್ಯೂಬಾಕ್ಕೆ ಮಾನವೀಯ ನೆಲೆಯಲ್ಲಿ ಚೀನಾ ಸಹಾಯ ಹಸ್ತ ನೀಡಿದೆ.

4.5 ಟನ್ ಆಹಾರ, ವಸ್ತ್ರಗಳ ಸಹಾಯವನ್ನು ಸ್ವೀಕರಿಸಿದ ಕ್ಯೂಬಾದ ವಿದೇಶಾಂಗ ಹೂಡಿಕೆ ಸಚಿವ ರೋಡ್ರಿಗೋ ಮಾಲ್‌ಮೆರಿಕಾ ಅವರು, ಚೀನಾದ ಈ ಮಾನವೀಯ ಸಹಾಯವನ್ನು ಕ್ಯೂಬಾ ಹೃತ್ಪೂರ್ವಕವಾಗಿ ಸ್ವೀಕರಿಸಿರುವುದಾಗಿ ಹೇಳಿದರು.

ಅಲ್ಲದೇ ಹೂ ಜಿಂಟಾವೋ ಅವರ ಭೇಟಿಯನ್ನು ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿದ ಅವರು, ಕ್ಯೂಬಾ ತನ್ನ ಅಭಿವೃದ್ಧಿಗಾಗಿ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ನುಡಿದರು.

ಅಲ್ಲದೇ ಕ್ಯೂಬಾದಲ್ಲಿನ ಚೀನಾ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಿರುವ ಕ್ಯೂಬಾ ಅಧಿಕಾರಿಗಳನ್ನು ಹು ಜಿಂಟಾವೋ ಅವರು ಸ್ಮರಿಸುವುದಾಗಿ ಹೇಳಿದ್ದು, 2011ರ ವೇಳೆಗೆ ಚೀನಾದ 5ಸಾವಿರ ವಿದ್ಯಾರ್ಥಿಗಳು ಕ್ಯೂಬಾದಲ್ಲಿ ಸ್ಪ್ಯಾನಿಷ್ ಭಾಷೆಯ ಕಲಿಕೆಯನ್ನು ಪೂರ್ಣಗೊಳಿಸಲಿದ್ದಾರೆ. ಆ ನಿಟ್ಟಿನಲ್ಲಿ ಚೀನಾ ಮತ್ತು ಕ್ಯೂಬಾ ನಡುವಿನ ಬಾಂಧವ್ಯ ಇದೇ ರೀತಿ ಮುಂದುವರಿಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

2004ರಲ್ಲಿ ಹು ಜಿಂಟಾವೋ ಅವರು ಕ್ಯೂಬಾಕ್ಕೆ ಮೊದಲ ಭೇಟಿ ನೀಡಿದ್ದರು. ಎರಡನೇ ಭೇಟಿ ವೇಳೆ ಅವರು ಅನೇಕ ಒಪ್ಪಂದಗಳಿಗೆ ಸಹಿ ಹಾಕಿದರು.

ಕ್ಯಾಸ್ಟ್ರೋ ಭೇಟಿ: ಕ್ಯೂಬಾಕ್ಕೆ 36ಗಂಟೆಗಳ ಕಾಲ ಭೇಟಿ ನೀಡಿದ ಹು ಅವರು ಕ್ಯೂಬಾ ಕ್ರಾಂತಿಕಾರಿ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದರು.

ರಹಸ್ಯ ಸ್ಥಳವೊಂದರಲ್ಲಿ ಕ್ಯಾಸ್ಟ್ರೋ ಅವರೊಂದಿಗೆ ಜಿಂಟಾವೋ ಅವರು ದೀರ್ಘ ಕಾಲ ಸಂಭಾಷಣೆ ನಡೆಸಿದ್ದು, ಅವರ ಆರೋಗ್ಯ ತುಂಬಾ ಸುಧಾರಿಸಿರುವುದಾಗಿ ತಿಳಿಸಿದ್ದಾರೆಂದು ಚೀನಾದ ಕ್ಸಿಹುನಾ ಸುದ್ದಿ ಸಂಸ್ಥೆ ವರದಿ ತಿಳಿಸಿದೆ. ಇಬ್ಬರು ಕಮ್ಯೂನಿಷ್ಟ್ ನಾಯಕರ ಭೇಟಿಯ ಚಿತ್ರವನ್ನು ವೆಬ್‌ಸೈಟ್‌ವೊಂದು ಪ್ರಕಟಿಸಿರುವುದಾಗಿ ಹೇಳಿದೆ.

ಇತ್ತೀಚೆಗೆ ಕ್ಯಾಸ್ಟ್ರೋ ಅವರು ವೆನೆಜುವೆಲಾ ಅಧ್ಯಕ್ಷ ಹ್ಯುಗೋ ಚಾವೇಜ್, ಬ್ರೆಜಿಲ್ ಅಧ್ಯಕ್ಷ ಲೂಜ್ ಇನಾಸಿಯೋ ಲುಲಾ ಡಾ ಸಿಲ್ವ ಸೇರಿದಂತೆ ಅನೇಕ ವಿದೇಶಿ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಿಲಿಫೈನ್ಸ್: ಸೇನಾ ದಾಳಿಗೆ 8 ಬಂಡುಕೋರರ ಬಲಿ
ಅಮೆರಿಕದಲ್ಲಿ ವ್ಯಾಸಂಗ-ಭಾರತೀಯರ ಮೇಲುಗೈ
ಗ್ಲಾಸ್ಗೋ ಸ್ಫೋಟ ರೂವಾರಿ ಬೆಂಗಳೂರಿನ ಕಫೀಲ್: ಬಿಲಾಲ್
ಆಘ್ಘಾನ್‌ಗೆ ಸೇನೆ ರವಾನಿಸುವುದಿಲ್ಲ: ಚೀನಾ
ತಾಲಿಬಾನ್‌ನಿಂದ ಫ್ರಾನ್ಸ್‌ ಮೇಲೆ ದಾಳಿ ಬೆದರಿಕೆ
ತುರ್ತುಪರಿಸ್ಥಿತಿ ವಾಪಸ್‌ಗೆ ಅಂತಿಮ ಗಡುವು:ಜಿಯಾ