ಪೂರ್ವ ಚೀನಾದಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿದು ಬಿದ್ದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 21ಕ್ಕೇರಿದ್ದು, 13 ಕಾರ್ಮಿಕರು ಕಣ್ಮರೆಯಾಗಿದ್ದಾರೆ. ರಕ್ಷಣಾ ದಳವು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿದೆ.
ಕಳೆದ ಮೂರು ದಿವಸಗಳಿಂದ ಕಣ್ಮರೆಯಾದ 13 ಕಾರ್ಮಿಕರ ಶೋಧದಲ್ಲಿ ತೊಡಗಿದ್ದು, ಹಾಂಗ್ ಹೂ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಸುರಂಗ ಮಾರ್ಗದಲ್ಲಿ ಕೆಸರು ತುಂಬಿಕೊಂಡಿರುವುದರಿಂದ ಅವರನ್ನು ಪತ್ತೆ ಹಚ್ಚಲು ವಿಳಂಬವಾಗುತ್ತಿದೆಯೆಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಂಗಳವಾರ ತಿಳಿಸಿದೆ.
ಕಾಣೆಯಾದ ಕಾರ್ಮಿಕರು ಬದುಕಿ ಉಳಿದಿರುವ ಸಾಧ್ಯತೆ ಕಡಿಮೆಯೆಂದು ರಕ್ಷಣಾ ಪಡೆಯ ಅಧಿಕಾರಿಗಳು ವಿವರಿಸಿದ್ದಾರೆ.
ಹಾಂಗ್ ಹೂ ಪಟ್ಟಣದಲ್ಲಿ ಶನಿವಾರ ಸುರಂಗ ಮಾರ್ಗದ ನಿರ್ಮಾಣದ ಕೆಲಸದ ವೇಳೆಯಲ್ಲಿ ದುರಂತವು ಸಂಭವಿಸಿದೆ. ಇದುವರೆಗೆ ಎಂಟು ಜನರ ಸಾವನ್ನು ಖಚಿತಪಡಿಸಲಾಗಿದೆ.
ಸುರಂಗ ಮಾರ್ಗವು 75 ಮೀಟರ್‌ಗಳಷ್ಟು ಆಳಕ್ಕೆ ಕುಸಿದು ಬಿದ್ದರಿಂದ ದೊಡ್ಡ ಹೊಂಡವಾಗಿದ್ದು, ಒಂದು ಬಸ್ ಸಹಿತ 11 ವಾಹನಗಳು ಸಿಕ್ಕಿ ಹಾಕಿಕೊಂಡಿವೆ.
ಚೀನಾದಲ್ಲಿ ಕಾರ್ಮಿಕರ ಸುರಕ್ಷಾ ಸುರಕ್ಷತೆಗೆ ಭದ್ರತೆ ಇಲ್ಲದಂತಾಗಿದ್ದು, ಪ್ರತಿವರ್ಷವು ಸಾವಿರಾರು ಕಾರ್ಮಿಕರು ಗಣಿ ದುರಂತದಲ್ಲಿ , ಕಾರ್ಖಾನೆ ಮತ್ತು ನಿರ್ಮಾಣ ಕೆಲಸದ ಸಂದರ್ಭದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. |