ಕೀನ್ಯಾ ಕರಾವಳಿ ತೀರ ಪ್ರದೇಶದಲ್ಲಿ 25 ಸಿಬ್ಬಂದಿಗಳಿದ್ದ ಸೌದಿ ಅರೇಬಿಯಾದ ತೈಲ ನೌಕೆಯೊಂದನ್ನು ಸೊಮಾಲಿಯಾ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟಿದೆ ಎಂದು ಅಮೆರಿಕ ಮಿಲಿಟರಿ ಮತ್ತು ಬ್ರಿಟಿಷ್ ವಿದೇಶಿ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಕೀನ್ಯಾ ತೀರದ ಪಟ್ಟಣ ಪ್ರದೇಶವಾದ ಮೊಂಬಾಸದಿಂದ 450 ನಾಟಿಕಲ್ ಮೈಲಿ ದೂರದಲ್ಲಿ ತೈಲ ನೌಕೆಯನ್ನು ಕಡಲ್ಗಳ್ಳರು ಅಪಹರಿಸಿರುವುದಾಗಿ ಅಮೆರಿಕ ನೌಕಪಡೆಯ ವಕ್ತಾರ ಪ್ಲೀಟ್ ತಿಳಿಸಿದ್ದಾರೆ.
ಸೆರೆ ಹಿಡಿಯಲ್ಪಟ್ಟ ನೌಕೆಯಲ್ಲಿ ಸಿಬ್ಬಂದಿಗಳಲ್ಲಿ ಕ್ರೊವೆಷಿಯಾ, ಪಿಲಿಫೈನ್ಸ್, ಪೊಲೆಂಡ್, ಸೌದಿ ಅರೆಬಿಯಾದವರಲ್ಲದೆ ಇಬ್ಬರು ಬ್ರಿಟಿಷ್ ಪ್ರಜೆಗಳುಸೇರಿದ್ದಾರೆಂದು ಬ್ರಿಟಿಷ್ ವಿದೇಶಿ ಕಾರ್ಯಾಲಯದ ವಕ್ತಾರರು ಖಚಿತಪಡಿಸಿದ್ದಾರೆ.
ತೈಲನೌಕೆಯ ಅಪಹರಣವು ಕಳೆದ ಕೆಲವು ತಿಂಗಳುಗಳಿಂದ ಕಡಲ್ಗಳ್ಳರು ನಡೆಸುತ್ತಿದ್ದ ಅತೀ ದೊಡ್ಡ ಅಪಹರಣ ಇದಾಗಿದೆ. |