ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತದ ನೌಕದಳದಿಂದ ಕಡಲ್ಗಳ್ಳರ ನೌಕೆ ಧ್ವಂಸ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ನೌಕದಳದಿಂದ ಕಡಲ್ಗಳ್ಳರ ನೌಕೆ ಧ್ವಂಸ
ಭಾರತದ ನೌಕಾದಳದ ಐಎನ್‌ಎಸ್ ತಾಬಾರ್ ನೌಕೆಯು ಸೊಮಾಲಿ ಕಡಲ್ಗಳ್ಳರು ಭಾರತದ ಹಡಗನ್ನು ಅಪಹರಿಸುವ ಯತ್ನವನ್ನು ವಿಫಲಗೊಳಿಸಿದ್ದು, ಕಡಲ್ಗಳ್ಳರನ್ನು ನೌಕಾಪಡೆ ಸಂಪರ್ಕಿಸಲು ಯತ್ನಿಸಿದಾಗ ಕಡಲ್ಗಳ್ಳರು ಗುಂಡಿನ ದಾಳಿ ನಡೆಸಿದರೆಂದು ಅದಕ್ಕೆ ಪ್ರತಿಯಾಗಿ ಭಾರತದ ನೌಕೆಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ಹೇಳಿದೆ.

ಬಳಿಕ ನೌಕಾದಳವು ಕಡಲ್ಗಳ್ಳರ ದಾಳಿಯನ್ನು ಹಿಮ್ಮೆಟ್ಟಿಸಿ ಅವರ ನೌಕೆಯನ್ನು ಧ್ವಂಸಗೊಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಮಧ್ಯೆ, ಬಹರೈನ್ ಮ‌ೂಲದ ನೌಕಾಕಮಾಂಡರ್ ಜೇನ್ ಕ್ಯಾಂಪ್‌ಬೆಲ್ ಸರಕುಸಾಗಣೆ ನೌಕೆಯೊಂದರ ಮೇಲೆ ಅಡೆನ್ ಕೊಲ್ಲಿಯಲ್ಲಿ ದಾಳಿ ಮಾಡಲಾಯಿತು ಎಂದು ಹೇಳಿದ್ದಾರೆ.

ಹಾಂಕಾಂಗ್ ಧ್ವಜದೊಂದಿಗೆ ತೆರಳುತ್ತಿದ್ದ ಹಡಗನ್ನು ಇರಾನ್ ಶಿಪ್ಪಿಂಗ್ ಲೈನ್ಸ್ ನಿರ್ವಹಿಸುತ್ತಿದೆ. ನೌಕೆಯ ಸಿಬ್ಬಂದಿಗಳ ಸ್ಥಿತಿಏನಾಯಿತೆಂದು ತಿಳಿದು ಬಂದಿಲ್ಲ. ಅಡೆನ್ ಕೊಲ್ಲಿಯಲ್ಲಿ ಸೊಮಾಲಿ ಕಡಲ್ಗಳ್ಳರು ಇನ್ನೊಂದು ಹಡಗನ್ನು ಕೈವಶಮಾಡಿಕೊಂಡಿದ್ದನ್ನು ಸೊಮಾಲಿ ಪ್ರದೇಶ ಪಂಟ್‌ಲ್ಯಾಂಡ್ ಸಚಿವ ಅಬ್ದುಲ್ ಕಾಡಿರ್ ಮ‌್ಯೂಸ್ ಯುಸುಫ್ ತಿಳಿಸಿದರು.

ಎರಡು ಸ್ಪೀಡ್ ಬೋಟ್‌ಗಳ ಮೂಲಕ ಕಡಲ್ಗಳ್ಳರ ನೌಕೆಯ ಮೇಲೆ ದಾಳಿ ನಡೆಸುವ ಮೂಲಕ ಕಡಲ್ಗಳ್ಳರನ್ನು ಬಗ್ಗು ಬಡಿಯಲಾಯಿತು ಎಂದು ಅಧಿಕಾರಿಗಳು ಹೇಳಿದರು.

ಇತ್ತೀಚೆಗೆ ಸೊಮಾಲಿ ಕರಾವಳಿ ಪ್ರದೇಶದಲ್ಲಿ ವಿದೇಶಿ ಹಡಗುಗಳನ್ನು ಕಡಲ್ಗಳ್ಳರು ಅಪಹರಿಸುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಎರಡು ದಿನಗಳ ಹಿಂದಷ್ಟೇ ಸ್ಟಾಲ್ಟರ್ ವಾಲೋರ್ ಹಡಗನ್ನು ಬಂಧಮುಕ್ತಗೊಳಿಸಿದ ಬೆನ್ನಲ್ಲೇ, ಮತ್ತೊಂದು ಜಪಾನ್ ಹಡಗನ್ನು ಅಪಹರಿಸಿತ್ತು.

ಇದೀಗ ಭಾರತೀಯ ನೌಕಾಪಡೆಯು ಸೊಮಾಲಿ ಕಡಲ್ಗಳ್ಳರನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ. ಕಡಲ್ಗಳ್ಳರ ನೌಕೆಯ ಮೇಲೆ ಗುಂಡಿನ ದಾಳಿ ನಡೆಸಿದಾಗ ಬೆಂಕಿ ಹೊತ್ತಿಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದು, ಸ್ಫೋಟ ಸದ್ದು ಕೇಳಿಸಿದ್ದು, ಹಡಗಿನೊಳಗೆ ಶೇಖರಿಸಿಟ್ಟಿದ ಸ್ಫೋಟಕ ಸ್ಫೋಟಿಸಿದ ಪರಿಣಾಮ ಬೆಂಕಿ ಹೊತ್ತುಕೊಂಡಿರುವುದಾಗಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕೀನ್ಯಾ: ಕಡಲ್ಗಳ್ಳರಿಂದ ತೈಲ ನೌಕೆ ಅಪಹರಣ
ಚೀನಾ : ಸುರಂಗ ಕುಸಿತಕ್ಕೆ 21 ಬಲಿ
ಕ್ಯೂಬಾಕ್ಕೆ ಹು ಜಿಂಟಾವೋ ಐತಿಹಾಸಿಕ ಭೇಟಿ
ಫಿಲಿಫೈನ್ಸ್: ಸೇನಾ ದಾಳಿಗೆ 8 ಬಂಡುಕೋರರ ಬಲಿ
ಅಮೆರಿಕದಲ್ಲಿ ವ್ಯಾಸಂಗ-ಭಾರತೀಯರ ಮೇಲುಗೈ
ಗ್ಲಾಸ್ಗೋ ಸ್ಫೋಟ ರೂವಾರಿ ಬೆಂಗಳೂರಿನ ಕಫೀಲ್: ಬಿಲಾಲ್