ನ್ಯೂಜಿಲ್ಯಾಂಡ್ ಸರಕಾರದ ಹೊಸ ಪ್ರಧಾನಿಯಾಗಿ ಆಯ್ಕೆಯಾದ ಜಾನ್ ಕೇ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಪೆರುವಿನಲ್ಲಿ ಈ ವಾರ ಆರಂಭವಾಗಲಿರುವ ಏಶ್ಯಾ ಫೆಸಿಫಿಕ್ ಸಾಂಪತ್ತಿಕ ಸಹಕಾರ(ಆಪೆಕ್) ಶೃಂಗಸಭೆಗೆ ಎಲ್ಲಾ ಅಡಚಣೆಗಳು ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗಿದೆ.
ಕನ್ಸ್‌ರ್‌ವೇಟಿವ್ ನ್ಯಾಷನಲಿಸ್ಟ್ ಪಾರ್ಟಿಯ ನೇತಾರನಾದ ಕೇ ಸಂಸತ್ತಿನಲ್ಲಿ ಇತರ ಮೂರು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರಕಾರವನ್ನು ರಚಿಸಿದ್ದು, ಗುರುವಾರ ಅವರು ಲಿಮಗೆ ತೆರಳಲಿದ್ದಾರೆ.
ನವೆಂಬರ್ ಎಂಟರಂದು ನಡೆದ ಸಂಸದೀಯ ಚುನಾವಣೆಯಲ್ಲಿ ಪಕ್ಷವು ಬಹುಮತ ಗಳಿಸಿದ್ದಾಗಲೇ ಕೇ ಆಪೆಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ನ್ಯೂಜಿಲ್ಯಾಂಡ್‌ನ್ನು ಪ್ರತಿನಿಧಿಕರಿಸಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಪ್ರಮುಖವಾದುದೆಂದು ತಿಳಿಸಿದರು.
ಹಳೆಯ ವಿದೇಶಿ ಕರೆನ್ಸಿ ವ್ಯಾಪಾರದ ಮಿಲಿಯಾಧಿಪತಿಯಾದ ಕೇ ಸಂಸತ್ತನ್ನು ಪ್ರತಿನಿಧಿಕರಿಸುವ ಅತೀ ಶ್ರೀಮಂತ ವ್ಯಕ್ತಿಯಾಗಿದ್ದು, ಪ್ರಧಾನ ಮಂತ್ರಿಯಾಗಿ ನ್ಯೂಜಿಲ್ಯಾಂಡ್‌ನ್ನು ಪ್ರತಿನಿಧಿಸಿದ ವ್ಯಕ್ತಿಗಳಲ್ಲಿ ಜಾನ್ ಕೇ ಅತಿ ಕಡಿಮೆ ಪ್ರಾಯದ(47) ವ್ಯಕ್ತಿಯಾಗಿದ್ದಾರೆ. |