ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮಾ 'ಹೌಸ್ ನಿಗ್ರೋ': ಅಲ್ ಜವಾಹರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾ 'ಹೌಸ್ ನಿಗ್ರೋ': ಅಲ್ ಜವಾಹರಿ
ಅಮೆರಿಕದ ನಿಯೋಜಿತ ಅಧ್ಯಕ್ಷ ಬರಾಕ್ ಒಮಾಮಾ ಅವರನ್ನು ಅಲ್ ಕೈದಾದ ನಂ.2 ನಾಯಕ ಐಮನ್ ಅಲ್ ಜವಾಹರಿ ಕಟುವಾದ ಜನಾಂಗೀಯ ನಿಂದನಾ ಶಬ್ದಗಳಿಂದ ಟೀಕಿಸಿದ್ದಾನೆ.

ಒಬಾಮ ಅವರನ್ನು 'ಹೌಸ್ ನಿಗ್ರೋ' (ಬಿಳಿಯರ ಸೇವೆಯಲ್ಲಿರುವ ಕಪ್ಪು ವರ್ಣಯರಿಗೆ ಉಪಯೋಗಿಸುವ ತುಚ್ಛ ಶಬ್ದ) ಎಂದು ಜರೆದಿರುವ ಜವಾಹರಿ ಕಟುವಾದ ಶಬ್ದಗಳಿಂದ ನಿಂದಿಸಿದ್ದಾನೆ.

ಜವಾಹರಿಯ ಧ್ವನಿಮುದ್ರಿತ ಸಂದೇಶವು ಮುಸ್ಲಿಂ ವೆಬ್‌ಸೈಟ್‌ಗಳಲ್ಲಿ ಬುಧವಾರ ಪ್ರಸಾರವಾಗಿದ್ದು, 'ಮುಸ್ಲಿಂ ಜನಾಂಗದಲ್ಲಿ ಜನಿಸಿದ್ದ ನೀವು,ಕ್ರೈಸ್ತ ಸಮುದಾಯದೊಡನೆ ಕೈಜೋಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾನೆ.

ಕಪ್ಪು ವರ್ಣಿಯನಾಗಿ ಬಿಂಬಿಸಿಕೊಂಡಿರುವ ಒಬಾಮಾ ಅಮೆರಿಕದ ನೀತಿಗಳನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸಂದೇಶದಲ್ಲಿ ವಿವರಿಸಿದ್ದಾನೆ. ಅಲ್ಲದೇ ಒಬಾಮಾ ಅವರ ಐತಿಹಾಸಿಕ ಗೆಲುವಿನ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಜವಾಹರಿ, ಒಬಾಮಾ ಸೇರಿದಂತೆ ವಿದೇಶಾಂಗ ಸಚಿವರಾದ ಕಾಲಿನ್ ಪೊವೆಲ್ ಹಾಗೂ ಕಾಂಡೋಲಿಸಾ ರೈಸ್ ಕೂಡ ಹೌಸ್ ನಿಗ್ರೋಗಳಾಗಿದ್ದಾರೆ ಎಂದು ಟೀಕಿಸಿದ್ದಾನೆ.

ಜವಾಹರಿ ಕಳುಹಿಸಿರುವ 11ನಿಮಿಷ 23ಸೆಕೆಂಡುಗಳ ಈ ವೀಡಿಯೋ ಸಂದೇಶದಲ್ಲಿ, ಒಬಾಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೇ, ಅಫ್ಘನಿಸ್ಥಾನಕ್ಕೆ ಸೇನೆಯನ್ನು ಕಳುಹಿಸಿದರೇ ಎಚ್ಚರ ಎಂಬುದಾಗಿಯೂ ಬೆದರಿಕೆ ಒಡ್ಡಿದ್ದಾನೆ. ಒಬಾಮಾ ಗೆಲುವಿನಿಂದ ಅಮೆರಿಕದ ರೀತಿ-ನೀತಿಗಳ ಬದಲಾವಣೆ ಸಾಧ್ಯವಿಲ್ಲ, ಕೇವಲ ಮುಸ್ಲಿಂ ಮತ್ತು ಇತರರನ್ನು ಹತ್ತಿಕ್ಕುವುದೇ ಪ್ರಮುಖ ಉದ್ದೇಶವಾಗಿದೆ ಎಂದು ಹರಿಹಾಯ್ದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾನ್ ಕೇ ನ್ಯೂಜಿಲ್ಯಾಂಡ್‌ ಪ್ರಧಾನಿ
ಶೀಘ್ರವೇ ಎಲ್‌ಟಿಟಿಇ ಮೇಲೆ ನಿಷೇಧ: ಶ್ರೀಲಂಕಾ
ಭಾರತದ ನೌಕದಳದಿಂದ ಕಡಲ್ಗಳ್ಳರ ನೌಕೆ ಧ್ವಂಸ
ಕೀನ್ಯಾ: ಕಡಲ್ಗಳ್ಳರಿಂದ ತೈಲ ನೌಕೆ ಅಪಹರಣ
ಚೀನಾ : ಸುರಂಗ ಕುಸಿತಕ್ಕೆ 21 ಬಲಿ
ಕ್ಯೂಬಾಕ್ಕೆ ಹು ಜಿಂಟಾವೋ ಐತಿಹಾಸಿಕ ಭೇಟಿ